ಸೋಮವಾರ, ಮೇ 10, 2021
26 °C

ಕೈಗಾರಿಕಾ ಸಂಘಗಳ ಸಮಾಲೋಚನಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಂದಿನ ಕೈಗಾರಿಕಾ ಕ್ಷೇತ್ರದ ಪರಿಸ್ಥಿತಿಯನ್ನು ವಿಶ್ಲೇಷಿಸಿ ಎಲ್ಲಾ ಸಂಘಟನೆಗಳು ಒಟ್ಟುಗೂಡಿ ಕೆಲಸ ಮಾಡುವುದರಿಂದ ಹಲವು ಪ್ರಯೋಜನ ಪಡೆಯಬಹುದು ಎಂದು ಕಾಸಿಯಾ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಹೇಳಿದರು.ಮೈಸೂರು ಕೈಗಾರಿಕೆಗಳ ಸಂಘದ ವತಿಯಿಂದ ಈಚೆಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಪಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ರಾಮಣ್ಣವರ ಮಾತನಾಡಿ ಮುಂಬರುವ ನವೆಂಬರ್‌ನಲ್ಲಿ ರಾಷ್ಟ್ರಮಟ್ಟದ ವೆಂಡರ್ ಡೆವಲಪ್‌ಮೆಂಟ್ ಕಾರ್ಯಕ್ರಮದಲ್ಲಿ ಎಲ್ಲಾ ಸಂಘದವರು ಸಹಕರಿಸಿದ್ದಲ್ಲಿ ಬಹುದಿನಗಳ ಬೇಡಿಕೆಯಾದ ಕೈಗಾರಿಕಾ ಅದಾಲತ್ ಕೂಡ ನಡೆಯಲಿದೆ ಎಂದರು.

ಎಂವೈಎಸ್‌ಎಸ್‌ಐಎಂಎ ಅಧ್ಯಕ್ಷ ಶ್ರೀಧರ ಪ್ರಸ್ತಾವನೆ ಮಂಡಿಸಿದರು. ಎಚ್‌ಐಇಎಂಎ ಅಧ್ಯಕ್ಷ ಜಯಂತ್, ವೀವರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಅಶ್ವತ್ಥನಾರಾಯಣ್, ಕಾಸಿಯಾದ ಮಾಜಿ ಅಧ್ಯಕ್ಷ ಅರವಿಂದ ಬುರ್ಜಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಶ್ರೀನಿವಾಸ್, ಕೌನ್ಸಿಲ್ ಸದಸ್ಯರಾದ ಶಶಿಧರ್, ಸುರೇಶ್‌ಕುಮಾರ್ ಜೈನ್, ವಿವಿಧ ಸಂಘಗಳ ಗೋಪಾಲ್, ರಾಜಶೇಖರ್, ಪುರುಷೋತ್ತಮ್ ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.