ಕೈಗಾರಿಕೆಗಳ ಹರಾಜಿಗೆ ಸವಾಲು

7

ಕೈಗಾರಿಕೆಗಳ ಹರಾಜಿಗೆ ಸವಾಲು

Published:
Updated:
ಕೈಗಾರಿಕೆಗಳ ಹರಾಜಿಗೆ ಸವಾಲು

ಬೆಂಗಳೂರು: `ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮರುಪಾವತಿಸದಿರುವ ರೈತರ ಆಸ್ತಿ-ಪಾಸ್ತಿಯನ್ನು ಹರಾಜು ಹಾಕಲು ಸಿದ್ಧವಿರುವಂತೆಯೇ ಬಂಡವಾಳಶಾಹಿಯ ಹಿಡಿತದಲ್ಲಿರುವ ಕೈಗಾರಿಕೆಗಳನ್ನು ಹರಾಜು ಹಾಕಲಿ~ ಎಂದು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ಸವಾಲು ಹಾಕಿದರು.ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘಗಳ ಒಕ್ಕೂಟವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹಕಾರಿಗಳಿಗೆ ನೇರ ತೆರಿಗೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಸಹಕಾರ ಸಂಸ್ಥೆಗಳು ಗಳಿಸುವ ಲಾಭಕ್ಕೂ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಸಂಸ್ಥೆಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಇದರೊಂದಿಗೆ ಸಂಗ್ರಹವಾದ ಠೇವಣಿಯ ಮೇಲೂ ಬಡ್ಡಿ ವಿಧಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ತನ್ನ ನಿಲುವನ್ನು ಬದಲಾಯಿಸಬೇಕು~ ಎಂದು ಆಗ್ರಹಿಸಿದರು.ಇಡೀ ದೇಶದ ಅಭಿವೃದ್ಧಿ ಸಹಕಾರಿ ಕ್ಷೇತ್ರದ ಮೇಲೆ ನಿಂತಿದೆ ಎಂಬ ಗಾಂಧೀಜಿ ಅವರ ತತ್ವವನ್ನು ಕೇಂದ್ರ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಿಸಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡುವ ಮನ್ನಣೆಯನ್ನು ಸಹಕಾರಿ ಸಂಘಗಳಿಗೆ ನೀಡುತ್ತಿಲ್ಲ~ ಎಂದು ಆರೋಪಿಸಿದರು.`ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಹಕಾರಿ ಬ್ಯಾಂಕುಗಳು ಹೈನುಗಾರಿಕೆ, ವ್ಯವಸಾಯ ಕ್ಷೇತ್ರಗಳಿಗೆ ಹಣ ಒದಗಿಸದೇ ಪ್ರತಿಭಟನೆ ನಡೆಸಲಿವೆ. ಕೈಗಾರಿಕೋದ್ಯಮಿಗಳ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಸದ್ದಿಲ್ಲದೇ ಮನ್ನಾ ಮಾಡುವಂತೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವಿರತ ಶ್ರಮಿಸುತ್ತಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು~ಎಂದು ಹೇಳಿದರು.`ತೆರಿಗೆ ವಿಷಯದಲ್ಲಿ ಕೇಂದ್ರ ಸರ್ಕಾರ ತಳೆದಿರುವ ತಾರತಮ್ಯ ಧೋರಣೆಯನ್ನು ಖಂಡಿಸುವ ಸಲುವಾಗಿ ಸಹಕಾರಿ ಸಂಘದ ಸದಸ್ಯರು ಒಟ್ಟುಗೂಡಬೇಕು. ಈ ನಿಟ್ಟಿನಲ್ಲಿ ಮತ್ತೊಂದು ಚಳವಳಿ ನಡೆಯಬೇಕು~ ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, `ಸಹಕಾರ ಕ್ಷೇತ್ರವೇ ಚಳವಳಿಯ ಆಧಾರ ಮೇಲೆ ರೂಪುಗೊಂಡಿದೆ. ಪ್ರಸ್ತುತ ಇದರ ಅಸ್ತಿತ್ವವನ್ನು ಉಳಿಸುವ ಸಲುವಾಗಿ ಮತ್ತೊಂದು ಚಳವಳಿ ನಡೆಯಬೇಕು. ಈ ನಿಟ್ಟಿನಲ್ಲಿ ಸಹಕಾರಿಗಳ ಸಹಕಾರ ಅಗತ್ಯ~ ಎಂದು ಹೇಳಿದರು.ಒಕ್ಕೂಟದ ಅಧ್ಯಕ್ಷ ರಾವ್ ಸಾಹೇಬ್ ಪಾಟೀಲ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಗುರುನಾಥ ಜ್ಯಾಂತಿಕರ್, ವಾಸವಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ    ಆರ್.ಪಿ.ರವಿಶಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry