ಕೈಗಾರಿಕೆ ಪ್ರಗತಿ ಇಳಿಮುಖ

7

ಕೈಗಾರಿಕೆ ಪ್ರಗತಿ ಇಳಿಮುಖ

Published:
Updated:

ನವದೆಹಲಿ (ಪಿಟಿಐ): ತಯಾರಿಕೆ ಮತ್ತು ಗಣಿಗಾರಿಕೆ ವಲಯಗಳ ಕಳಪೆ ಪ್ರದರ್ಶನದಿಂದ ದೇಶದ ಕೈಗಾರಿಕೆ ಉತ್ಪಾದನೆ ಸೂಚ್ಯಂಕವು (ಐಐಪಿ) ಮಾರ್ಚ್‌ನಲ್ಲಿ ಶೇ 3.5ರಷ್ಟು ಕುಸಿತ ಕಂಡಿದೆ.2011ರ ಮಾರ್ಚ್‌ನಲ್ಲಿ `ಐಐಪಿ~ ಶೇ 9.4ರಷ್ಟಿತ್ತು. ಒಟ್ಟಾರೆ ಕೈಗಾರಿಕೆ ಉತ್ಪಾದನೆಗೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕೆ ವಲಯ ಮಾರ್ಚ್‌ನಲ್ಲಿ ಶೇ 4.4ಕ್ಕೆ ಇಳಿಕೆ ಕಂಡಿದೆ. ಗಣಿಗಾರಿಕೆ ವಲಯದ ಉತ್ಪಾದನೆಯೂ ಶೇ 1.3ರಷ್ಟು ಇಳಿದಿದೆ. ಇದು ಒಟ್ಟಾರೆ `ಐಐಪಿ~ ಪ್ರಮಾಣದ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ.

ಗಣಿಗಾರಿಕೆ ಮತ್ತು ತಯಾರಿಕೆ ವಲಯಗಳು ಕ್ರಮವಾಗಿ ಶೇ 2 ಮತ್ತು ಶೇ 2.9ರಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ 2010-11ನೇ ಸಾಲಿನಲ್ಲಿ ಶೇ 8.2ರಷ್ಟಿದ್ದ ಕೈಗಾರಿಕೆ ಉತ್ಪಾದನೆ ಸೂಚ್ಯಂಕ 2011-12ನೇ ಸಾಲಿನಲ್ಲಿ ಶೇ 2.8ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.ವಿದ್ಯುತ್ ಮತ್ತು ಗ್ರಾಹಕ ಸರಕುಗಳ  ಉತ್ಪಾದನೆ ಮಾರ್ಚ್‌ನಲ್ಲಿ ಕ್ರಮವಾಗಿ ಶೇ 2.7 ಮತ್ತು ಶೇ 0.7ರಷ್ಟು ಪ್ರಗತಿ ಕಂಡಿದೆ. ತಯಾರಿಕೆ ವಲಯದ 22 ಉದ್ಯಮಗಳು ಧನಾತ್ಮಕ ಪ್ರಗತಿ ಕಂಡಿವೆ ಎಂದು ಸರ್ಕಾರ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry