ಕೈಗಾರಿಕೆ ಸ್ಥಾಪನೆಗೆ ಕ್ರಮ: ಶಾಸಕ

7

ಕೈಗಾರಿಕೆ ಸ್ಥಾಪನೆಗೆ ಕ್ರಮ: ಶಾಸಕ

Published:
Updated:

ಅರಸೀಕೆರೆ: ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಲಂಬಾಣಿ ಸಮಾಜವು ಶಕ್ತಿಯುತವಾಗಿ ಸಂಘಟಿತಗೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ಪಟ್ಟಣದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ತಾಲ್ಲೂಕಿನ ಮೈಸೂರು ಸೀಮೆ ಲಂಬಾಣಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹೇಮಾವತಿ ಹಾಗೂ ಯಗಚಿ ಜಲಾಶಯ ಮೂಲದಿಂದ ಈಗಾಗಲೇ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯ ಹಂತದಲ್ಲಿವೆ. ಅಲ್ಲದೆ ಪಟ್ಟಣ ಪ್ರದೇಶಗಳಿಗೆ ಕೆಲಸಕ್ಕಾಗಿ ಗುಳೇ ಹೋಗುತ್ತಿರುವುದನ್ನು ತಪ್ಪಿಸಲು ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡಿ ಉದ್ಯೋಗ ಸೃಷ್ಟಿಸಲು ಬೃಹತ್‌ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ ತಮ್ಮ ಕನಸಾಗಿದೆ ಎಂದರು.ತಾಲ್ಲೂಕು ಲಂಬಾಣಿ ಸಂಘದ ಅಧ್ಯಕ್ಷ  ಸಿದ್ದಾನಾಯ್ಕ್‌ ಮಾತನಾಡಿ, ಲಂಬಾಣಿ ಸಮಾಜಕ್ಕೆ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ಸಹಕಾರ ನೀಡಬೇಕು ಎಂದು ಶಾಸಕ ಶಿವಲಿಂಗೇಗೌಡ ಅವರನ್ನು ಕೋರಿದರು.ಜಿ.ಪಂ ಸದಸ್ಯ ಕೃಷ್ಣಾನಾಯಕ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಪುರಸಭೆ ಅಧ್ಯಕ್ಷ  ಮೋಹನ್‌ಕುಮಾರ್‌, ಎ.ಪಿ.­ಎಂ.ಸಿ ಅಧ್ಯಕ್ಷ  ಅಜ್ಜಪ್ಪ, ತಾಲೂ್ಲಕು ಯಾದವ ಸಮಾಜದ ಅಧ್ಯಕ್ಷ  ಬಂಡಿಗೌಡರ ರಾಜಣ್ಣ, ತಾಲೂ್ಲಕು ಗಂಗಾಮತ ಸಮಾಜದ ಅಧ್ಯಕ್ಷ ಯಳವಾರೆ ಕೇಶವಮೂರ್ತಿ, ತಾಲ್ಲೂಕು ಮೈಸೂರು ಸೀಮೆ ಲಂಬಾಣಿ ಸಮಾಜದ ಗೌರವಾಧ್ಯಕ್ಷ ಆರ್‌. ಲಚ್ಛಾನಾಯಕ್‌, ಸಂಘದ ಕಾರ್ಯದರ್ಶಿ ಚತುರಾನಾಯ್ಕ್‌ ಸಹ ಕಾರ್ಯದರ್ಶಿ ಎಚ್‌.ಎಸ್‌. ಜಯಣ್ಣ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry