ಬುಧವಾರ, ಜೂನ್ 16, 2021
21 °C

ಕೈತೋಟಗಳಿಂದ ಜೈವಿಕ ಸಮತೋಲನ: ಸಂಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿ ಸಾವಿರಾರು ಮರಗಳು ಮತ್ತು ಉದ್ಯಾನಗಳು ನಾಶವಾದರೂ ನಗರವಾಸಿಗಳು ಬೆಳೆಸಿ­ರುವ ಕೈತೋಟಗಳು ಕೀಟ ಪ್ರಪಂಚವನ್ನು ಸಲಹುತ್ತಿದ್ದು ಜೈವಿಕ ಸಮತೋಲನ ಕಾಪಾಡುತ್ತಿವೆ ಎಂದು ಸಂಶೋಧನೆಯೊಂದು ಹೇಳಿದೆ.‘ಟ್ರಸ್ಟ್ ಫಾರ್ ರಿಸರ್ಚ್ ಎಕಾಲಜಿ ಅಂಡ್ ಎನ್ವಿ­ರಾನ್‌­­ಮೆಂಟ್’ ಸಂಸ್ಥೆಯಡಿ ನಗರದ ಮೂವರು ಪರಿ­ಸರ ತಜ್ಞರು ನಡೆಸಿದ್ದ ‘ಬೆಂಗಳೂರಿನ ಕೈತೋಟ­ಗ­ಳಲ್ಲಿ ಕೀಟ ವೈವಿಧ್ಯದ ಸಾಂದ್ರತೆ ಮತ್ತು ಹಂಚಿಕೆ’ ಎಂಬ ಸಂಶೋಧನೆಯು ಈ ವಿಚಾರವನ್ನು ಬಹಿರಂಗ­ಪಡಿಸಿದೆ.

ನಗರವಾಸಿಗಳ ಸಾವಯವ ಕೈತೋಟದೆಡೆಗಿನ ಒಲವು ಕೀಟ­ಗಳ ಸಮತೋಲನವನ್ನು ಕಾಪಾಡುವಲ್ಲಿ ಪರೋಕ್ಷ­ವಾಗಿ ನೆರವಾಗಿವೆ. ಬೆಂಗಳೂರಿಗರು ತಮ್ಮ ಕೈತೋಟದಲ್ಲಿ ರಾಸಾ­ಯನಿಕಗಳು ಮತ್ತು ಕೀಟ­ನಾಶಕಗಳನ್ನು ಬಳಸ­ದಿರು­ವುದು ಕೀಟ ವೈವಿಧ್ಯಕ್ಕೆ ಅನುಕೂಲ­ವಾಗಿದೆ ಎನ್ನುತ್ತಾರೆ ಸಂಶೋಧಕರಲ್ಲಿ ಒಬ್ಬರಾದ ಮಧುಮಿತ ಜಗಮೋಹನ್.ಸಂಶೋಧಕಿ ಹರಿಣಿ ನಾಗೇಂದ್ರ, ‘ಸಂಶೋಧನೆಯಲ್ಲಿ 2,185 ಪ್ರಭೇದದ ಕೀಟಗಳನ್ನು ಪತ್ತೆ ಮಾಡಲಾಗಿದೆ. ಅವುಗಳಲ್ಲಿ 25 ಮನೆಯಂಗಳದ ಮರಗಳಲ್ಲಿ ಜೀವಿಸುವ, 117 ಸಣ್ಣ ಗಿಡಗಳು ಮತ್ತು ಪೊದೆಗಳು ಹಾಗೂ  50 ಪ್ರಭೇದದ ಕೀಟಗಳನ್ನು ಕೈತೋಟಗಳಲ್ಲಿ   ಗುರುತಿಸಲಾಗಿದೆ. ಹುಲ್ಲು ಹಾಸು ಹೊದಿಸಿರುವ ಕೈತೋಟಗಳಿಗಿಂತ ತೆರೆದ ಮಣ್ಣಿನ ಕೈತೋಟಗಳಲ್ಲಿ ಕೀಟಗಳ ಸಾಂದ್ರತೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ’ ಎನ್ನುತ್ತಾರೆ.ಕೋರಮಂಗಲ, ಮಾರತ್‌ಹಳ್ಳಿ, ಹೊರಮಾವು, ಮಹಾಲಕ್ಷ್ಮೀ ಬಡಾವಣೆ, ಜೆ.ಪಿ.ನಗರ, ಶಂಕರಪುರ, ಶ್ರೀನಗರ, ವಿಜಯನಗರ, ಸದಾಶಿವನಗರ, ಬಸವೇಶ್ವರ­ನಗರ, ಡಾಲರ್ಸ್ ಕಾಲೊನಿ, ಬಿಟಿಎಂ ಬಡಾ­ವಣೆ­ಯಲ್ಲಿ ನಾಗರಿಕರು ರೂಪಿಸಿರುವ ಕೈತೋಟಗಳಲ್ಲಿ ಜೈವಿಕ ಸಮತೋಲನ ಮತ್ತು ಆಹಾರ ಸರಪಳಿಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಇರುವೆ­ಗಳು, ಕಣಜಗಳು, ಚಿಟ್ಟೆಗಳು, ದುಂಬಿಗಳು ಮತ್ತು ವಿವಿಧ ಪ್ರಭೇದದ ನೊಣಗಳು ಹೇರಳವಾಗಿವೆ ಎಂದು ಸಂಶೋಧನೆ ಹೇಳುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.