ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಅತೃಪ್ತಿ

ಶುಕ್ರವಾರ, ಮೇ 24, 2019
33 °C

ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಅತೃಪ್ತಿ

Published:
Updated:

ಹುಬ್ಬಳ್ಳಿ: `ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ ಐದು ಮಂದಿ ಜೀವಾವಧಿ ಕೈದಿಗಳ ಅವಧಿ ಪೂರ್ವ ಬಿಡುಗಡೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿರುವುದು, ಇತರ ಜೈಲುವಾಸಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಡುಗಡೆ ನಿರೀಕ್ಷೆಯಲ್ಲಿದ್ದ ಕೈದಿಗಳು ಈ ಕುರಿತು ಬಹಿರಂಗವಾಗಿ ತಮ್ಮ ನೋವು ತೋಡಿಕೊಂಡಿದ್ದಾರೆ~ ಎಂದು ಕಾರಾಗೃಹ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.`ಅವಧಿಪೂರ್ವ ಬಿಡುಗಡೆಗಾಗಿ ರಾಜ್ಯ ಸರ್ಕಾರ ಅರ್ಹ 90 ಮಂದಿಯ ಪಟ್ಟಿ ನೀಡಿದ್ದರೂ ರಾಜ್ಯಪಾಲರು ಕೇವಲ ಐದು ಮಂದಿಯ ಬಿಡುಗಡೆಗೆ ಒಪ್ಪಿದ್ದಾರೆ. ಆ ಮೂಲಕ ನಮ್ಮ ಮಧ್ಯೆ ತಾರತಮ್ಯ ಮಾಡಲಾಗಿದೆ. ಇದು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತಹ ವಾತಾವರಣ ಸೃಷ್ಟಿಸಿದೆ. ಸಾಮಾಜಿಕ ನ್ಯಾಯ ನಿರೀಕ್ಷಿಸಿದ್ದ ನಮಗೆ, ರಾಜ್ಯಪಾಲರ ಕ್ರಮ ನೋವು ಉಂಟು ಮಾಡಿದೆ~ ಎಂದು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬ ತಿಳಿಸಿದ್ದಾನೆ.ಇದೇ ಕಾರಣಕ್ಕೆ ಜೈಲಿನಲ್ಲಿ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣದಲ್ಲಿ ಮಾತ್ರ ಭಾಗವಹಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸಿದ್ದನ್ನು ಹೊರತುಪಡಿಸಿದರೆ, ಇತರ ಕಾರ್ಯಕ್ರಮಗಳಿಂದ ದೂರ ಉಳಿದು ನಮ್ಮ ನೋವು ವ್ಯಕ್ತಪಡಿಸಿದ್ದೇವೆ. ಸಿಹಿತಿಂಡಿಯನ್ನೂ ಸೇವಿಸಿಲ್ಲ~ ಎಂದಿದ್ದಾನೆ.`ಕಾರಾಗೃಹ ನಿಯಮದ ಪ್ರಕಾರ, ಮಾಫಿ  ಅವಧಿ ಸೇರಿ 13 ವರ್ಷ 2 ತಿಂಗಳು ಪೂರ್ತಿಯಾದ ಕೈದಿಗಳು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಶಿಫಾರಸು ಮಾಡುವ `ಸಲಹಾ ಮಂಡಳಿ~ಯ `ಸಂದರ್ಶನ~ಕ್ಕೆ ಅರ್ಹರು. ಹೀಗಾಗಿ 10 ವರ್ಷ ಪೂರೈಸಿದ ಮಹಿಳಾ ಕೈದಿಗಳಿದ್ದರೂ 90 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ~ ಎಂದೂ ಮೂಲಗಳು ತಿಳಿಸಿವೆ.

........`ರಾಜ್ಯದ ಎಂಟು ಕೇಂದ್ರ ಕಾರಾಗೃಹಗಳಲ್ಲಿ 14 ವರ್ಷ ಪೂರ್ತಿಗೊಳಿಸಿದ 130 ಕೈದಿಗಳಿದ್ದಾರೆ. 2009ರಲ್ಲಿ ಅವಧಿ ಪೂರ್ವ ಬಿಡುಗಡೆಗಾಗಿ ಸರ್ಕಾರ ತಯಾರಿಸಿದ್ದ 594 ಕೈದಿಗಳ ಪಟ್ಟಿಯನ್ನು ಬದಿಗಿಟ್ಟು, ಈ ಬಾರಿ ಹೊಸತಾಗಿ 90 ಕೈದಿಗಳ ಪಟ್ಟಿ ತಯಾರಿಸಲಾಗಿತ್ತು.ಈ ಪೈಕಿ ಬೆಂಗಳೂರು ಜೈಲಿನಿಂದ ಒಬ್ಬ, ಮೈಸೂರಿನಿಂದ ಇಬ್ಬರು ಮತ್ತು ದೇವನಹಳ್ಳಿ ಬಳಿ ಇರುವ ಬಯಲು ಬಂದಿಖಾನೆಯಿಂದ ಇಬ್ಬರು ಹೀಗೆ ಐದು ಮಂದಿ ಜೀವಾವಧಿ ಶಿಕ್ಷಾ ಬಂಧಿಗಳ ಬಿಡುಗಡೆಗೆ ಅವಕಾಶ ನೀಡಲಾಗಿದೆ~ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry