ಕೈದಿಗಳ ಯೋಗಕ್ಷೇಮ ವಿಚಾರಣೆ
ಕೊಲಂಬೊ (ಪಿಟಿಐ): ಕಳೆದ ಶುಕ್ರವಾರ ವೆಲಿಕಾಡಾ ಜೈಲಿನಲ್ಲಿ ನಡೆದ ಘರ್ಷಣೆಯಲ್ಲಿ 27 ಕೈದಿಗಳು ಸತ್ತು 40 ಜನರಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಭಾರತೀಯರ ಯೋಗಕ್ಷೇಮ ವಿಚಾರಿಸಲು ಭಾರತದ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದರು.
ವೆಲಿಕಾಡಾ ಜೈಲಿನಲ್ಲಿ ಶಿಕ್ಷೆಗೆ ಒಳಗಾದ 33 ಮಂದಿ ಮತ್ತು ವಿಚಾರಣೆ ಎದುರಿಸುತ್ತಿರುವ ಐದು ಮಂದಿ ಭಾರತೀಯರು ಇದ್ದಾರೆ. ಅವರ ಯೋಗಕ್ಷೇಮವನ್ನು ನಮ್ಮ ಅಧಿಕಾರಿಗಳು ವಿಚಾರಿಸಿಕೊಂಡು ಬಂದಿದ್ದಾರೆ ಎಂದು ಶ್ರೀಲಂಕಾದಲ್ಲಿಯ ಭಾರತದ ರಾಯಭಾರ ಕಚೇರಿಯ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.