ಸೋಮವಾರ, ಮೇ 23, 2022
30 °C

ಕೈದಿಯೊಂದಿಗೆ ಐಸ್‌ಕ್ರೀಂ ತಿಂದ ಪೇದೆಗಳ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಐಎಎನ್‌ಎಸ್): ಕೈದಿಯೊಂದಿಗೆ ಸಲಿಗೆಯಿಂದ ವರ್ತಿಸುವ ಪೊಲೀಸರಿಗೆ ಎಚ್ಚರಿಕೆಯ ಪಾಠ ಎನಿಸುವ ಘಟನೆಯೊಂದು ಮಂಗಳವಾರ ನಡೆದಿದೆ.ವಿಚಾರಣಾಧೀನ ಕೈದಿಯ ಜೊತೆ ಸೇರಿ ಐಸ್‌ಕ್ರೀಂ ತಿಂದ ತಪ್ಪಿಗಾಗಿ ಇಬ್ಬರು ಪೊಲೀಸರು ಬುಧವಾರ ಅಮಾನತಿನ ಬೆಲೆ ತೆತ್ತಿದ್ದಾರೆ. ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಕೈದಿಯೊಂದಿಗೆ ಹೊರಗೆ ಹೋದ ಪೊಲೀಸರು ಅಂಗಡಿಯೊಂದರಲ್ಲಿ ಆತನ ಜೊತೆ ಐಸ್‌ಕ್ರೀಂ ಸೇವಿಸುತ್ತಿದ್ದ ದೃಶ್ಯಗಳನ್ನು ಸ್ಥಳೀಯ ಟಿ.ವಿ ವಾಹಿನಿಗಳು ಪ್ರಕಟಿಸಿದ್ದವು. ಪತ್ರಿಕೆಗಳು ಸಹ ಈ ಬಗ್ಗೆ ವರದಿ ಮಾಡಿದ್ದವು. ಇದನ್ನು ಆಧರಿಸಿ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.