ಕೈರೋ ಫುಟ್ ಬಾಲ್ ಪಂದ್ಯದ ಗಲಭೆ: 74 ಸಾವು

7

ಕೈರೋ ಫುಟ್ ಬಾಲ್ ಪಂದ್ಯದ ಗಲಭೆ: 74 ಸಾವು

Published:
Updated:
ಕೈರೋ ಫುಟ್ ಬಾಲ್ ಪಂದ್ಯದ ಗಲಭೆ: 74 ಸಾವು

 

ಕೈರೋ (ಐಎಎನ್ಎಸ್):  ಪೋರ್ಟ್ ಸೈಯದ್ ನಗರದಲ್ಲಿನ ಫುಟ್ ಬಾಲ್ ಪಂದ್ಯ ಮುಗಿದ ನಂತರ  ಫುಟ್ ಬಾಲ್ ಆಟಗಾರರ ಅಭಿಮಾನಿ ತಂಡಗಳ ನಡುವೆ ನಡೆದ ಘರ್ಷಣೆ ಮತ್ತು ಅದರ ಬೆನ್ನಲ್ಲಿಯೇ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ 74 ಜನರು ಮೃತಪಟ್ಟ ದಾರುಣ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಪೋರ್ಟ್ ಸೈಯದ್ ನ ಅಲ್ ಮಸ್ರಿ ಫುಟ್ ಬಾಲ್ ಕ್ಲಬ್ ತಂಡವು, ಕೈರೋದ ಖ್ಯಾತ ತಂಡಗಳಲ್ಲೊಂದಾದ ಅಲ್ ಅಹ್ಲೈ  ಪೂಟ್ ಬಾಲ್ ಕ್ಲಬ್ ತಂಡದಿಂದ 3-1 ಗೋಲುಗಳಿಂದ ಸೋತಾಗ, ಸ್ಥಳೀಯ ತಂಡದ ಅಭಿಮಾನಿಗಳು ಆಟದ ಮೈದಾನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದು ಎರಡೂ ತಂಡಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಎನ್ನಲಾಗಿದೆ.

ಸ್ಥಳೀಯ ಪುಟ್ ಬಾಲ್ ಕ್ಲಬ್ ಅಭಿಮಾನಿಗಳು ಕೈರೋದ ಫುಟ್ ಬಾಲ್ ಕ್ಲಬ್ ನ ಆಟಗಾರರು ಮತ್ತು ತರಬೇತುದಾರರನ್ನು ಥಳಿಸಿದಾಗ ಘರ್ಷಣೆ ಆರಂಭವಾಯಿತು. ಪಂದ್ಯ ವೀಕ್ಷಣೆಗೆ ಬಂದಿದ್ದ 40,000ಕ್ಕೂ ಅಧಿಕ ಪ್ರೇಕ್ಷಕರು ಹೊರಹೋಗಲು ದೌಡಾಯಿಸಿದಾಗ ಉಂಟಾದ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಯಿತು. ಕೆಲವು ದುಷ್ಕರ್ಮಿಗಳು ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂಗೆ ಕೊಳ್ಳಿ ಇಟ್ಟರೆಂದು ವರದಿಯಾಗಿದೆ.

ಈ ಘಟನೆಯ ನಂತರ ನಿಗದಿ ಮಾಡಿದ್ದ  ಫುಟ್ ಬಾಲ್ ಪಂದ್ಯಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗಿದೆ. ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಆಚರಿಸಲು ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry