ಭಾನುವಾರ, ಮೇ 9, 2021
27 °C

ಕೈವಾರದಲ್ಲಿ ಫ್ಲೋರೈಡ್‌ಮುಕ್ತ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ 1000 ಅಡಿ ಆಳದ ಕೊಳವೆ ಬಾವಿಗಳಿಂದ ಬರುತ್ತಿರುವ ನೀರನ್ನು ನಿರಂತರವಾಗಿ ಸೇವಿಸುವುದರಿಂದ ಮೂಳೆಗಳ ಸವೆತವಾಗಿ ಫ್ಲೋರೋಸಿಸ್ ಖಾಯಿಲೆಗೆ ಒಳಗಾಗುತ್ತಿರುವುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ.ತಾಲ್ಲೂಕಿನ ಕೈವಾರ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಎಂ.ಎಸ್. ರಾಮಯ್ಯ ವೈದ್ಯಕೀಯ ಮಹಾ ವಿದ್ಯಾಲಯ, ಗುಜರಾತ್ ಸರ್ಕಾರದ ಸಿಎಸ್‌ಐಆರ್ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿರುವ ಸಮುದಾಯ ಫ್ಲೋರೈಡ್ ನೀರು ಶುದ್ಧೀಕರಣ ಘಟಕವನ್ನು ಜನತೆಗೆ ಅರ್ಪಿಸಲು ಎಲ್ಲ ಸಿದ್ಧತೆ ಪೂರ್ಣವಾಗಿದೆ.ಕೈವಾರ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಿರುವ ಈ ಘಟಕದಲ್ಲಿ ನೀರಿನಲ್ಲಿರುವ ಫ್ಲೋರೈಡ್ ಅಂಶ ಹೊರತೆಗೆದು, ಶುದ್ಧ ನೀರನ್ನು ಸರಬರಾಜು ಮಾಡಲಾಗುತ್ತದೆ. ಇಂತಹ ನೀರನ್ನು ಕೈವಾರದ ಬೀದಿ, ಬೀದಿಗಳಲ್ಲಿ ಸರಬರಾಜು ಮಾಡಲು ಟ್ಯಾಂಕರ್ ಒಳಗೊಂಡ ನೂತನ ವಾಹನದ ವ್ಯವಸ್ಥೆ ಮಾಡಲಾಗಿದೆ.ರಿವರ್ಸ್‌ ಆಸ್ಮೋಸಿಸ್ ಪ್ಲಾಂಟ್(ಆರ್.ಓ ಪ್ಲಾಂಟ್) ಅನ್ನು ಗುಜರಾತ್‌ನ ಸಿ.ಎಸ್.ಐ.ಆರ್ ಕಂಪನಿ ನೀಡಿದೆ. ಶೆಡ್, ನೀರಿನ ಟ್ಯಾಂಕ್ ಮತ್ತು ನೀರನ್ನು ವಿತರಿಸುವ ವ್ಯವಸ್ಥೆಯನ್ನು ಯೋಗಿನಾರೇಯಣ ಮಠದ ಆಶ್ರಮದ ವತಿಯಿಂದ ಮಾಡಲಾಗುತ್ತಿದೆ.ಗ್ರಾಮದ ಜನತೆಗೆ ಫ್ಲೋರೈಡ್‌ಮುಕ್ತ ನೀರನ್ನು ಒದಗಿಸುವುದು ಆಶ್ರಮದ ಮುಖ್ಯ ಉದ್ದೇಶ. 20 ಲೀಟರ್ ಕ್ಯಾನ್ ವಿತರಣೆಯ ಖರ್ಚುಗಳಿಗಾಗಿ ಕೇವಲ 5 ರೂಪಾಯಿ ಮಾತ್ರ ತೆಗೆದುಕೊಳ್ಳಲಾಗುತ್ತದೆ.ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಆಸಕ್ತಿಯ ಫಲವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಶುದ್ಧೀಕರಣ ಘಟಕ ಆರಂಭವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.