ಬುಧವಾರ, ಏಪ್ರಿಲ್ 14, 2021
31 °C

ಕೊಂಕಣಿ ಅಕಾಡೆಮಿ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರಕಟವಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಎಡ್ವರ್ಡ್ ನಝ್ರೆತ್ (ಕೊಂಕಣಿ ನಾಟಕ-ಗೌರವ ಪ್ರಶಸ್ತಿ) ಹಾಗೂ ಪ್ರಕಾಶ್ ಖಾರ್ವಿ (ಅಂಗವಿಕಲ ಈಜುಪಟು-ವಿಶೇಷ ಪ್ರಶಸ್ತಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. ಭಾಷಾ ಕ್ಷೇತ್ರದಲ್ಲಿ ಅಗ್ನೆಲ್ ರೊಡ್ರಿಗಸ್, ಕಲಾ ವಿಭಾಗದಲ್ಲಿ ಗೋಪಿನಾಥ್ ಭಟ್ (ಕೊಂಕಣಿ ನಾಟಕ) ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ಪುಸ್ತಕ ಪುರಸ್ಕಾರ ಪ್ರಶಸ್ತಿಗೆ ಕನ್ನಡ-ಕೊಂಕಣಿ ಭಾಷಾಂತರ- ‘ಜನ್ನ ಮಹಾಕವಿಚೊ ಯಶೋಧರ ಚರಿತ’ (ಲೇ. ಸ್ವೀವನ್ ಕ್ವಾಡ್ರಸ್ ಪೆರ್ಮುದೆ), ಕೊಂಕಣಿ ಕವನ- ‘ಕಾಟ್ ತುಟ್ಚೋ ವೇಳ್ (ಲೇ. ಅಂಟೋನಿ ಪ್ರಕಾಶ್ ಡಿಸೋಜ) ಹಾಗೂ ಕೊಂಕಣಿ ಸಣ್ಣಕತೆ- ‘ಸಾತೆಂ’ (ಲೇ.ಕ್ಯಾಥರಿನ್ ರೋಡ್ರಿಗಸ್) ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಪುರಸ್ಕೃತರ ವಿಭಾಗಕ್ಕೆ ‘ಕಾನೂನು ಮಾಹೆತ್’ ಲೇಖನ- (ಸ್ಟ್ಯಾನ್ಲಿ ಆರ್.ಡಿಕೋಸ್ಟ) ಆಯ್ಕೆ ಮಾಡಲಾಗಿದೆ ಎಂದರು.ಪ್ರಶಸ್ತಿ ಪ್ರದಾನ 26ಕ್ಕೆ: ಇದೇ 26ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಕಾಶಿ ಮಠ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಗೌರವ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪುಸ್ತಕ ಪುರಸ್ಕಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಪ್ರದಾನ ಮಾಡುವರು ಎಂದರು. ಗೌರವ ಪ್ರಶಸ್ತಿ ರೂ. 10 ಸಾವಿರ ನಗದು ಹಾಗೂ ಪುಸ್ತಕ ಬಹುಮಾನ ರೂ. 5 ಸಾವಿರ ನಗದು, ಶಾಲು, ಸ್ಮರಣಿಕೆ, ಪ್ರಮಾಣ ಪತ್ರ ಒಳಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.