ಕೊಂಕಣಿ ಪ್ರತಿಭೆಗಳಿಗೆ `ಕ್ಷಮತಾ' ಶಿಬಿರ

ಮಂಗಳವಾರ, ಜೂಲೈ 23, 2019
20 °C

ಕೊಂಕಣಿ ಪ್ರತಿಭೆಗಳಿಗೆ `ಕ್ಷಮತಾ' ಶಿಬಿರ

Published:
Updated:

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನ ನಿಧಿಯ ವತಿಯಿಂದ ವಿದ್ಯಾರ್ಥಿವೇತನ ಪಡೆದ ಎಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಅಧ್ಯಯನ ಮಾಡುವ ಒಟ್ಟು 455 ಕೊಂಕಣಿ ಮಾತೃಭಾಷೆ ವಿದ್ಯಾರ್ಥಿಗಳಿಗೆ  ಕ್ಷಮತಾ (ಕೊಂಕಣಿ ವಿದ್ಯಾರ್ಥಿಗಳ ಉನ್ನತ ಸಾಧನೆ ಪ್ರೇರಣೆ ಮತ್ತು ತರಬೇತಿ ಅಕಾಡೆಮಿ) ಶಿಬಿರಗಳ ಸರಣಿಯನ್ನು ಸೋಮವಾರ ಆರಂಭಿಸಲಾಯಿತು.ಉದ್ಯಮಿ ವಾಲ್ಟರ್ ಡಿಸೋಜ ಅವರು ಶಿಬಿರ ಉದ್ಘಾಟಿಸಿದರು. ಶಿಬಿರಾರ್ಥಿಗಳು ತಮ್ಮ ಜೀವನದಲ್ಲಿ ವ್ಯಕ್ತಿ ವಿಕಸನಕ್ಕೆ ಅನುಕೂಲವಾಗುವಂತ ಇಂತಹ ಶಿಬಿರಗಳ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಬೇಕು ಎಂದು ಸಲಹೆ ನೀಡಿದರು.ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕಾಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವೀರ ವೆಂಕಟೇಶ ಚಾರಿಟೆಬಲ್ ಟ್ರಸ್ಟ್‌ನ ಕಾರ್ಯದರ್ಶಿ ಗಣಪತಿ ಪೈ, ಕ್ಷಮತಾ  ಶಿಬಿರದ ಸಂಚಾಲಕ ಗಿರಿಧರ ಕಾಮತ್, ಸಿಂಡಿಕೇಟ ಬ್ಯಾಂಕಿನ ನಿವೃತ್ತ ಅಧಿಕಾರಿ ಸುರೇಶ ಶೆಣೈ, ವಿಶ್ವ ಕೊಂಕಣಿ ಕೇಂದ್ರ ಭಾಷಾ ಸಂಸ್ಥಾನದ ಸಹಾಯಕ ನಿರ್ದೇಶಕ ಗುರುದತ್ತ ಬಂಟ್ವಾಳಕಾರ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry