ಸೋಮವಾರ, ಮೇ 17, 2021
26 °C

ಕೊಂಕಲ್: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಸರಬರಾಜು ಮಾಡುವ ನೀರಿನ ಟ್ಯಾಂಕ್‌ನಲ್ಲಿ ಹನಿ ನೀರಿಲ್ಲ. ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಕೊಳವೆ ಬಾವಿಗಳು ಕೆಟ್ಟಿವೆ ತಕ್ಷಣ ದುರಸ್ತಿ ಕೆಲಸ ಕೈಗೆತ್ತಿಕೊಳ್ಳಬೇಕೆಂದು ಗ್ರಾಮದ ಮುಖಂಡ ಶಿವಕುಮಾರ ಗುಬ್ಬಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ.ಕೃಷ್ಣಾ ನದಿ ತೀರವು ಬತ್ತಿ ಹೋಗಿದ್ದು ಜಾನುವಾರುಗಳಿಗೆ ನೀರಿನ ಬರ ಎದುರಾಗಿದೆ ಅಲ್ಲದೆ ಮೇವಿನ ಕೊರೆತೆ ಉಂಟಾಗಿದೆ. ಗ್ರಾಮ ಪಂಚಾಯಿತಿ ಕಾರ್ಯಾಲಯವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಅವರು ದೂರಿದ್ದಾರೆ.ಖೊಟ್ಟಿ ಸಹಿ: ಕೊಂಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಗ್ರಾಮ ಪಂಚಾಯಿತಿ ಅಧ್ಯಕ್ಷರ ಖೊಟ್ಟಿ ಸಹಿ ಮಾಡಿ ಸುಮಾರು 3ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯ ಚಾಂದಸಾಬ್ ರಂಗಂಪೇಟ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಲಿಖಿತವಾದ ದೂರು ಸಲ್ಲಿಸಿದ್ದಾರೆ.ಗ್ರಾಮ ಪಂಚಾಯಿತಿ ಅಧ್ಯಕ್ಷರು ಅನಕ್ಷರಸ್ಥರಾಗಿದ್ದು ಅವರ ಅಧಿಕಾರ ದುರ್ಬಳಕೆ ಮಾಡಿಕೊಂಡು ಜಂಟಿ ಚೆಕ್‌ಗಳಿಗೆ ಅಧ್ಯಕ್ಷ ಖೊಟ್ಟಿ ಸಹಿ ಮಾಡಿದ್ದಾರೆ. ಅಧ್ಯಕ್ಷರಿಗೆ ವಿಚಾರಿಸಿದರೆ ಕೆಲವೊಂದು ಚೆಕ್‌ಗೆ ಮಾತ್ರ ಸಹಿ ಹಾಕಲಾಗಿದೆ ಇನ್ನುಳಿದ ಸಹಿ ನನ್ನದಲ್ಲ ಎನ್ನುತ್ತಾರೆ. ಬ್ಯಾಂಕ್‌ಗೆ ತೆರಳಿ ಬ್ಯಾಲೆನ್ಸ್ ಶೀಟ್ ತೆಗೆದುಕೊಂಡು ಪರಿಶೀಲಿಸಿದಾಗ ಹಣ ದುರ್ಬಳಕೆಯಾಗಿದ್ದು ಕಂಡು ಬರುತ್ತದೆ. ಸಮಗ್ರವಾದ ತನಿಖೆ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಕ್ರಮ ತೆಗೆದುಕೊಂಡು ಕೆಟ್ಟು ನಿಂತ ಬೊರ್‌ವೆಲ್ ಹಾಗೂ ತುರ್ತುಕೆಲಸಗಳನ್ನು ನಿರ್ವಹಿಸುವಂತೆ ಸದಸ್ಯರು ಮನವಿ ಮಾಡಿದರೆ ಹಣಕಾಸಿನ ಕೊರೆತೆಯಿದೆ. ಎಲ್ಲಿಂದ ಹಣ ತಂದು ರಿಪೇರಿ ಮಾಡಲಿ ಎಂದು ಮರು ಪ್ರಶ್ನಿಸುತ್ತಾರೆ. ತಕ್ಷಣ ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.