`ಕೊಂಚಾವರಂಗೆ ಪೂರ್ಣಶಕ್ತಿ'

ಬುಧವಾರ, ಜೂಲೈ 17, 2019
30 °C

`ಕೊಂಚಾವರಂಗೆ ಪೂರ್ಣಶಕ್ತಿ'

Published:
Updated:

ಚಿಂಚೋಳಿ:  ಮಕ್ಕಳ ಮಾರಾಟ ಮತ್ತು ದತ್ತು ನೀಡಿಕೆಯಿಂದ ಚರ್ಚೆಗೆ ಗ್ರಾಸವಾದ ತಾಲ್ಲೂಕಿನ ಕೊಂಚಾವರಂ ಸುತ್ತಲ ಹಳ್ಳಿಗಳ ಜನತೆಗೆ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಪೂರ್ಣ ಶಕ್ತಿ ಯೋಜನೆ ಮಂಜೂರು ಮಾಡಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಅಕುರಾತಿ ತಿಳಿಸಿದರು.ಇಲ್ಲಿನ ಚಂದಾಪುರದ ಸಿ.ಬಿ.ಪಾಟೀಲ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಮಿಕರ ಕಾನೂನು ಮತ್ತು ಸೌಲಭ್ಯಗಳು ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪೂರ್ಣಶಕ್ತಿ ಯೋಜನೆ ಮಹಿಳೆಯರಿಗಾಗಿ ಜಾರಿಯಾದ ಯೋಜನೆಯಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಏಕಗವಾಕ್ಷಿ ಪದ್ಧತಿಯಂತೆ ಅರಿವು ಮೂಡಿಸಲು ಕೊಂಚಾವರಂ ಗ್ರಾಮ ಪಂಚಾಯಿತಿಯಲ್ಲಿ ಪೂರ್ಣಶಕ್ತಿ ಕೇಂದ್ರ ತೆರೆಯಲಾಗುವುದು ಎಂದರು.ಒಟ್ಟು ಜನಸಂಖ್ಯೆಯ ಬಹುಪಾಲು ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯ ಸೌಲಭ್ಯ ನೀಡದೇ ಅವರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಶೇ.50ಕ್ಕಿಂತ ಹೆಚ್ಚು ಮಂದಿ ತಮ್ಮ ಹಕ್ಕಿನಿಂದ ದೂರ ಉಳಿದಿದ್ದಾರೆ. ಸರ್ಕಾರ ರೂಪಿಸಿದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸಿದರೆ ದೇಶದ ಬಡತನ ನಿರ್ಮೂಲನೆ ಆಗುವುದರಲ್ಲಿ ಸಂಶಯವ್ಲ್ಲಿಲ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ. ಗುಂಜಿಗಾವಿ ಹೇಳಿದರು.ಸರ್ಕಾರ ಸಮಾಜದ ಎಲ್ಲಾ ವರ್ಗಗಳ ಜನತೆಯ ಕಲ್ಯಾಣಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಚಿಂಚೋಳಿಯಂತಹ ಹಿಂದುಳಿದ ಭಾಗದಲ್ಲಿ ಯೋಜನೆಗಳ ಬಗ್ಗೆ ಅರಿವು ಮತ್ತು ಅವುಗಳ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯ ಕೊರತೆಯಿಂದ ಜನ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.ನ್ಯಾಯಾಧೀಶರಾದ  ಜಿ.ಪ್ರಭಾವತಿ, ಎ.ವಿಜಯನ್, ಕೆ.ಎಂ ಶೈನಿ ಮತ್ತು ಜಯರಾಮ, ಎಸ್.ಎಂ. ಚಿದಾನಂದ, ಸಿದ್ದಲಿಂಗಪ್ಪ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry