ಗುರುವಾರ , ಏಪ್ರಿಲ್ 15, 2021
31 °C

ಕೊಂಡು ಓದುವವರೇ ಶ್ರೇಷ್ಠರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಂಡು ಓದುವವರೇ ಶ್ರೇಷ್ಠರು

ಬೆಂಗಳೂರು: `ಕೃತಿಯನ್ನು ಕೊಂಡು ಓದಿ ಚಿಂತನೆ ನಡೆಸಿ ಜ್ಞಾನ ಪ್ರಸಾರ ಮಾಡುವವರು ಶ್ರೇಷ್ಠ ಓದುಗರು~ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಬಣ್ಣಿಸಿದರು.ಚಿಕ್ಕಮಗಳೂರಿನ ಪ್ರೊ.ಚಂದ್ರಯ್ಯ ನಾಯ್ಡು ಶೈಕ್ಷಣಿಕ ಹಾಗೂ ಸಾಮಾಜಿಕ ಟ್ರಸ್ಟ್, ವೆಂಕಟೇಶ್ವರ ಪ್ರಕಾಶನದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ. ಚಂದ್ರಯ್ಯ ನಾಯ್ಡು ಅವರ ಸಮಗ್ರ ವಚನಗಳು `ಚಂದ್ರ ವಚನ ವಲ್ಲರಿ~ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಒಂದು ವರ್ಗದ ಓದುಗರು ಕೃತಿ ಉಚಿತವಾಗಿ ಸಿಕ್ಕಾಗ ಓದುತ್ತಾರೆ. ಮತ್ತೊಂದು ವರ್ಗದವರು ಕೃತಿಯನ್ನು ಕೊಂಡುಕೊಳ್ಳುತ್ತಾರೆ. ಆದರೆ, ಕೃತಿಯನ್ನು ಓದುವುದಿಲ್ಲ. ಇವರೆಲ್ಲರಿಗಿಂತ ಪುಸ್ತಕವನ್ನು ಖರೀದಿಸಿ ಓದಿ ಚಿಂತನೆ ಮಾಡುವವರೇ ಶ್ರೇಷ್ಠರು~ ಎಂದು ಅಭಿಪ್ರಾಯಪಟ್ಟರು.`ಯಾವುದೇ ವ್ಯಕ್ತಿ ಪ್ರೀತಿ ವಿಶ್ವಾಸದಿಂದ ಹಾಗೂ ವಿನಯದಿಂದ ಬದುಕಬೇಕು. ಬೇರೊಬ್ಬರ ಸ್ವತ್ತುಗಳನ್ನು ಕಿತ್ತುಕೊಳ್ಳುವ ಮನೋಭಾವ ಇರಬಾರದು. ಜನರ ಪ್ರೀತಿ ವಿಶ್ವಾಸವೇ ದೊಡ್ಡ ಆಸ್ತಿ~ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುಸ್ತಕ ಲೋಕಾರ್ಪಣೆ ಮಾಡಿ, `ಈಗಿನ ರಾಜಕೀಯ ಸ್ಥಿತಿಯಲ್ಲಿ ರಾಜಕಾರಣಿಗಳಿಗೆ ನೆಮ್ಮದಿ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮನಸ್ಸು ಪರಿವರ್ತನೆಗೆ ಹಾಗೂ ನೆಮ್ಮದಿ ಪಡೆಯಲು ಈ ಕೃತಿಯ ವಚನಗಳನ್ನು ಓದುತ್ತೇನೆ~ ಎಂದರು.ವಾಣಿ ಚಂದ್ರಯ್ಯ ನಾಯ್ಡು ಮಾತನಾಡಿ, `ಈ ಕೃತಿಯಲ್ಲಿ 868 ಪುಟಗಳಿದ್ದು, 1,658 ವಚನಗಳು ಇವೆ. ಚಂದ್ರಯ್ಯ ನಾಯ್ಡು ನಿಧನರಾಗುವ ಮುನ್ನವೇ ಕೃತಿ ಲೊಕಾರ್ಪಣೆ ಮಾಡಲು ಯೋಜಿಸಲಾಗಿತ್ತು~ ಎಂದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರಧಾನ ಗುರುದತ್ತ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕು ಆಯೋಗದ ಮಾಜಿ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ  ವಲಯ ಸಂಚಾಲಕಿ ಬಿ.ಕೆ.ಅಂಬಿಕಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.