ಕೊಂಡ್ಲಹಳ್ಳಿ ಗ್ರಾಮಸಭೆ.ಸುವರ್ಣ ಗ್ರಾಮೋದಯಕ್ಕೆ ಮನವಿ

7

ಕೊಂಡ್ಲಹಳ್ಳಿ ಗ್ರಾಮಸಭೆ.ಸುವರ್ಣ ಗ್ರಾಮೋದಯಕ್ಕೆ ಮನವಿ

Published:
Updated:

ಮೊಳಕಾಲ್ಮುರು: ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿರುವ ಕೊಂಡ್ಲಹಳ್ಳಿಗೆ ಶೀಘ್ರವೇ ಸುವರ್ಣ ಗ್ರಾಮೋದಯ ಯೋಜನೆ ಮಂಜೂರು ಮಾಡಬೇಕು ಎಂದು ಗ್ರಾ.ಪಂ. ಸದಸ್ಯ ಎಸ್.ಕೆ. ಗುರುಲಿಂಗಪ್ಪ ಮನವಿ ಮಾಡಿದರು.ತಾಲ್ಲೂಕಿನ ಕೊಂಡ್ಲಹಳ್ಳಿಯ ಗ್ರಾ.ಪಂ. ಆವರಣದಲ್ಲಿ ಈಚೆಗೆ ಜಿ.ಪಂ., ತಾ.ಪಂ. ಮತ್ತು ಸ್ಥಳೀಯ ಗ್ರಾ.ಪಂ. ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.ಗ್ರಾಮ ವೇಗವಾಗಿ ಬೆಳೆಯುತ್ತಿದ್ದು ರಸ್ತೆ, ಚರಂಡಿ, ವಸತಿ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದೆ. ಗ್ರಾ.ಪಂ. ಕಚೇರಿಗೇ ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲದೇ ತೊಂದರೆಯಾಗಿದೆ. ಆದ್ದರಿಂದ ಗ್ರಾಮೋದಯ ಯೋಜನೆ ಮಂಜೂರು ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾ.ಪಂ. ಇಒ ಬಿ.ಎಸ್. ಮಂಜುನಾಥ್ ಮಾತನಾಡಿ, 2010-11ನೇ ಸಾಲಿಗೆ ಕೊಂಡ್ಲಹಳ್ಳಿಗೆ ` 1.21ಕೋಟಿ ವೆಚ್ಚದ ಕ್ರಿಯಾಯೋಜನೆ ನೀಡಲಾಗಿತ್ತು, ಈ ಪೈಕಿ ` 52 ಲಕ್ಷ  ವೆಚ್ಚದಲ್ಲಿ 38 ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. ಏಪ್ರಿಲ್‌ನಿಂದ ಉದ್ಯೋಗಖಾತ್ರಿ ಅಡಿಯಲ್ಲಿ ಕೆಲಸ ನೀಡಲಾಗುವುದು ಎಂದು ಹೇಳಿದರು.ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಮಾತನಾಡಿ, ಕೊಂಡ್ಲಹಳ್ಳಿಯಲ್ಲಿ ಗ್ರಾ.ಪಂ. ನಿವೇಶನ ನೀಡಿದಲ್ಲಿ ಇಲಾಖೆ ` 4 ಲಕ್ಷ ವೆಚ್ಚದಲ್ಲಿ ಹಣ್ಣು ಹಾಗೂ ತರಕಾರಿ ಮಾರಾಟ ಮಳಿಗೆ ನಿರ್ಮಿಸಲಿದೆ ಎಂದು ಹೇಳಿದರು.ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಎಂ.ಸಿ. ರತ್ನಮ್ಮ, ಉಪಾಧ್ಯಕ್ಷ ಸುರೇಶ್, ತಾ.ಪಂ. ಸದಸ್ಯೆ ಸುಶೀಲಮ್ಮ, ಗ್ರಾ.ಪಂ. ಸದಸ್ಯರಾದ ಟಿ. ತಿಪ್ಪೇಸ್ವಾಮಿ, ಬಿ. ತಿಪ್ಪೇಸ್ವಾಮಿ, ಕೆ.ಸಿ. ಮಂಜುನಾಥ್, ಚಿದಾನಂದಪ್ಪ, ಪಂಪಾಪತಿ, ಪಿಡಿಒ ಬಸವರಾಜ್, ಕಾರ್ಯದರ್ಶಿ ದಾಸಪ್ಪ ಮತ್ತಿತರರು ಹಾಜರಿದ್ದರು.ನಿರಾಸಕ್ತಿ

 ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾದ ಗ್ರಾಮಸಭೆಗೆ ಸಾರ್ವಜನಿಕರು ತೀವ್ರ ನಿರಾಸಕ್ತಿ ತೋರಿದರು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದ ಪರಿಣಾಮ ಅಧಿಕಾರಿಗಳು ಇರಿಸು- ಮುರುಸು ಅನುಭವಿಸುವಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry