ಭಾನುವಾರ, ಮೇ 22, 2022
24 °C

ಕೊಂಬೆ ಸವರುವಿಕೆಯಿಂದ ಇಳುವರಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ : `ಮಾವಿನಲ್ಲಿ ರಂಬೆಗಳು ಒತ್ತೊತ್ತಾಗಿ ಬೆಳೆದಾಗ ಅವುಗಳಲ್ಲಿ ಕೆಲವೊಂದು ರಂಬೆಗಳನ್ನು ಕತ್ತರಿಸಿ ವಿರಳಗೊಳಿಸಿದರೆ ಸೂರ್ಯನ ಬೆಳಕು ಒಳಭಾಗದಲ್ಲಿ ಬೀಳುವಂತಾಗಿ ಕಾಯಿ ಕಚ್ಚಲು ಹೆಚ್ಚು ಅನುಕೂಲವಾಗಲಿದೆ~ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಗೋಪಾಲ್ ತಿಳಿಸಿದರು.ತಾಲ್ಲೂಕಿನ ಮಾರಗೊಂಡನಹಳ್ಳಿ ಗ್ರಾಮದ ಪ್ರಗತಿ ಪರ ರೈತ ಎನ್.ಗೋಪಾಲಯ್ಯ ಮಾವಿನ ತೋಟದಲ್ಲಿ ಮಾವಿನ ಗಿಡಗಳನ್ನು ಸವರುವಿಕೆ (ಪ್ರೂನಿಂಗ್) ಕುರಿತು ಸುದ್ದಿಗಾರರೊಂದಿಗೆ ಈ ಕುರಿತು ಮಾಹಿತಿ ನೀಡಿದರು.

`ರಂಬೆ ಸವರುವಿಕೆ~ಯಿಂದ ಕೀಟ ಮತ್ತು ರೋಗ ಬಾಧೆ ಕಡಿಮೆ ಮಾಡಬಹುದು. ಅಲ್ಲದೆ ಎಲೆಗಳು, ಕುಡಿಗಳ ಮೇಲೆ  ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಬೀಳುವುದರಿಂದ, ಇತರೆ ಕೀಟಗಳ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ. ರಂಬೆ ವಿರಳದಿಂದಾಗಿ ಮರದ ಒಳ ಮತ್ತು ಹೊರ ಆವರಣದಲ್ಲಿ ಹೆಚ್ಚಿನ ಹೂವು ಮತ್ತು ಕಾಯಿ ಕಚ್ಚಿ ಇಳುವರಿ ಹಾಗೂ ಗಾತ್ರದಲ್ಲಿ ಮತ್ತು ಗುಣಮಟ್ಟದಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.ಒತ್ತೊತ್ತಾಗಿ ಬೆಳೆದ ಮರಗಳಲ್ಲಿ  `ಜಿಗಿ ಹುಳು~ ಹೆಚ್ಚಿರುತ್ತದೆ. ಆಗಾಗ್ಗೆ ಕೊಂಬೆಗಳನ್ನು ಸವರುವುದರಿಂದ ಈ ಹುಳದ ಕಾಟ ಕಡಿಮೆಯಾಗಲಿದೆ. ನೆನಪಿರಲಿ, ಕೈ ಗರಗಸದಿಂದಲೇ ರಂಬೆ ಕಟಾವು ಮಾಡಬೇಕು. ಗಿಡದ ಬೆಳವಣಿಗೆಗೆಯನ್ನಾಧರಿಸಿ ಸವರಬೇಕು(ಸಿಕ್ಕುಬಿಡಿಸುವುದು) ಸೂಕ್ತ. ಆದರೆ ಕತ್ತರಿಸಿದ ತುದಿಗೆ ಬ್ಲೈಟಾಕ್ಸ್, ಔಷಧಿಯನ್ನು ಮಂದವಾಗಿ ಕಲಸಿ    (ಪೇಸ್ಟ್) ಹಚ್ಚಬೇಕು ಇದರಿಂದ ರಂಬೆ (ಕೊಂಬೆಗಳು) ಒಣಗಲು ಹಾಗೂ ರೋಗ ತಡೆಗಟ್ಟಲು ಹೆಚ್ಚಿನ ಅನುಕೂಲವಾಗಲಿದೆ.ಎಚ್ಚರಿಕೆ: ಹೂವು ಅಥವಾ ಫಸಲಿನ ವೇಳೆಯಲ್ಲಿ ರಂಬೆ ಕಟಾವು ಮಾಡಬಾರದು. ಜುಲೈ- ಸೆಪ್ಟಂಬರ್ ರಂಬೆ ಸವರಲು ಸೂಕ್ತ ಕಾಲ. ಮರ ಚಿಗುರುವ ಆರಂಭದಲ್ಲಿ ಸೇವಿನ್ ಕೀಟನಾಶಕ ಎರಡು ಗ್ರಾಂ ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿದ್ದಲ್ಲಿ ಬರಲಿರುವ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.ರೈತ ಎನ್.ಗೋಪಲಯ್ಯ ಮಾತನಾಡಿ, `ಹನ್ನೆರಡು ಎಕರೆಯಲ್ಲಿ 30್ಡ30 ಅಡಿ ಅಂತರದಲ್ಲಿ 600 ಮಾವಿನ ಗಿಡ ಬೆಳೆಸಿ ಒಂಭತ್ತು ವರ್ಷವಾಗಿವೆ. ದಶೇರಿ ಹಾಗೂ ಮಲ್ಲಿಕಾ 20 ಗಿಡಗಳಿವೆ. ಉಳಿದೆಲ್ಲಾ ಅಲ್ಫಾನ್ಸೋ (ಬಾದಾಮಿ) ಗಿಡಗಳಿವೆ. ಮಾವಿನ ಪ್ರತಿ ನಾಲ್ಕು ಗಿಡದ ಅಂತರದಲ್ಲಿ ಒಂದೊಂದು ಸೀಬೆ, ಸಪೋಟ, ಅಂಜೂರ, ಸೀತಾಫಲ, ಗಿಡ ಬೆಳೆಸಲಾಗಿದೆ, ಕಳೆದ ವರ್ಷ 3.50 ಲಕ್ಷ ರೂ ಮಾವಿನ ಫಸಲು ಸಿಕ್ಕಿದೆ. ಗಿಡಗಳು ರಂಬೆಗಳು ಒತ್ತೊತ್ತಾಗಿ ಬೆಳೆದಿದ್ದು ತೋಟಗಾರಿಕೆ ಇಲಾಖೆಯ ಮಾಹಿತಿ ಮೇರೆಗೆ ವಿರಳಗೊಳಿಸಲು ಮುಂದಾಗಿದ್ದೇನೆ~ ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.