ಕೊಕ್ಕರೆ ಬೆಳ್ಳೂರು ಅಭಿವೃದ್ಧಿಗೆ 4.5ಕೋಟಿ

7

ಕೊಕ್ಕರೆ ಬೆಳ್ಳೂರು ಅಭಿವೃದ್ಧಿಗೆ 4.5ಕೋಟಿ

Published:
Updated:
ಕೊಕ್ಕರೆ ಬೆಳ್ಳೂರು ಅಭಿವೃದ್ಧಿಗೆ 4.5ಕೋಟಿ

ಮದ್ದೂರು: ವಿಶ್ವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರದಿಂದ 4.5ಕೋಟಿ ರೂಪಾಯಿ ಬಿಡುಗಡೆಗೊಂಡಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭ ಗೊಳ್ಳಲಿದೆ ಎಂದು ಶಾಸಕ ಬಿ.ರಾಮಕೃಷ್ಣ ತಿಳಿಸಿದರು.ತಾಲ್ಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇಂತಹ ಪ್ರಸಿದ್ಧಧಾಮದಲ್ಲಿ ಜಿಲ್ಲಾಮಟ್ಟದ ಕೊಕ್ಕೊ ಪಂದ್ಯಾವಳಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದ್ದು, ಇಲ್ಲಿನ ಜನರು ಪಕ್ಷಿ ಪ್ರೇಮದೊಂದಿಗೆ ಕ್ರೀಡೆಯನ್ನು ಪ್ರೇಮಿ ಸುತ್ತಾರೆ ಎಂಬುದು ಸಾಬೀತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಲ್ಲಾಪಂಚಾಯಿತಿ ಸದಸ್ಯೆ ಲಲಿತಾ ಪ್ರಕಾಶ್ ಉದ್ಘಾಟಿಸಿದರು. ಶಾಸಕರಾದ ಕಲ್ಪನ ಸಿದ್ದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಅಧ್ಯಕ್ಷೆ ಚೌಡಮ್ಮ ಕ್ರೀಡಾಜ್ಯೋತಿ ಸ್ವೀಕರಿಸಿದರು. ತಾಪಂ ಸದಸ್ಯೆ ಬೋರಮ್ಮ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಕೃಷ್ಣ, ಗ್ರಾಪಂ ಅಧ್ಯಕ್ಷ ಕೆ. ಬೋರಯ್ಯ, ಮುಖಂಡರಾದ ವೆಂಕ ಟೇಶ್, ತೈಲೂರುರಘು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಕಾಂತರಾಜು, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ಎಸ್. ರವೀಶ್, ಸಿ.ರಾಜು, ಶಿವರಾಮೇಗೌಡ, ಜಯಶಂಕರ್, ಶಿವಣ್ಣಗೌಡ, ಶಿವಲಿಂಗೇ ಗೌಡ, ರಾಮಚಂದ್ರಪ್ಪ, ಮುಖ್ಯಶಿಕ್ಷಕರಾದ ದೇವೇಗೌಡ, ಬಿ.ಎನ್. ಮರೀಗೌಡ ಹಲವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry