ಕೊಕ್ಕೊ: ಕರ್ನಾಟಕ ತಂಡಗಳಿಗೆ ಪ್ರಶಸ್ತಿ

7

ಕೊಕ್ಕೊ: ಕರ್ನಾಟಕ ತಂಡಗಳಿಗೆ ಪ್ರಶಸ್ತಿ

Published:
Updated:

ಚಂದರಗಿ (ಬೆಳಗಾವಿ ಜಿಲ್ಲೆ): ಲೀಗ್ ಹಂತದಿಂದಲೂ ಗೆಲುವನ್ನೇ ಕಾಯ್ದುಕೊಂಡು ಬಂದ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಇಲ್ಲಿನ ಕ್ರೀಡಾ ಶಾಲೆಯಲ್ಲಿ ಶುಕ್ರವಾರ ಮುಕ್ತಾಯಗೊಂಡ 17 ವರ್ಷದೊಳಗಿನವರ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡವು.ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ಕೂಲ್ ಗೇಮ್ಸ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಇಲ್ಲಿನ ಕ್ರೀಡಾ ಶಾಲೆಯಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕದ ಬಾಲಕರು ಮಹಾರಾಷ್ಟ್ರ ತಂಡವನ್ನು ಹಾಗೂ ಬಾಲಕಿಯರು ನವದೆಹಲಿ ತಂಡವನ್ನು ಮಣಿಸಿದರು.ಆಲ್‌ರೌಂಡ್ ಪ್ರದರ್ಶನ ನೀಡಿದ ಯಲ್ಲಪ್ಪ ಡಾನಕಶಿರೂರ ಫೈನಲ್‌ನಲ್ಲೂ ಮಿಂಚಿ ತಂಡ 20 ಪಾಯಿಂಟ್‌ಗಳನ್ನು ಕಲೆ ಹಾಕಲು ನೆರವಾದರು. ಪ್ರತ್ಯುತ್ತರವಾಗಿ ಎದುರಾಳಿಗಳು ಗಳಿಸಿದ್ದು 16 ಪಾಯಿಂಟ್ ಮಾತ್ರ. ಟೂರ್ನಿ ಶ್ರೇಷ್ಠ ಪ್ರಶಸ್ತಿ ಯಲ್ಲಪ್ಪ ಅವರಿಗೆ ಸಂದಿತು.

ಬಾಲಕಿಯರ ವಿಭಾಗದ್ಲ್ಲಲೂ ನಿರೀಕ್ಷಿತ ಫಲಿತಾಂಶ ಹೊರಬಿದ್ದಿತು. ಟೂರ್ನಿಯ ಶ್ರೇಷ್ಠ ಆಟಗಾರ್ತಿ ಮೇಘಾ ಕೆ.ಎಸ್. ಅವರ ಉತ್ತಮ ಆಟದ ನೆರವಿನಿಂದ ಬಾಲಕಿಯರ ತಂಡ ನವದೆಹಲಿ ತಂಡವನ್ನು 7 ಪಾಯಿಂಟ್‌ಗಳಿಂದ (13-6) ಮಣಿಸಿತು. ಪ್ರಥಮಾರ್ಧದಲ್ಲಿ 5 ಪಾಯಿಂಟ್‌ಗಳಿಂದ ಮುಂದಿದ್ದ ಕರ್ನಾಟಕ ಬಾಲಕಿಯರು ದ್ವಿತೀಯಾರ್ಧದಲ್ಲೂ ಆಧಿಪತ್ಯ ಮುಂದುವರಿಸಿ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡರು.ಕೇರಳದ ಅಜಯ್ ಮೈಕೆಲ್ ಉತ್ತಮ ರಕ್ಷಣಾತ್ಮಕ ಆಟಗಾರ ಮತ್ತು ಮಹಾರಾಷ್ಟ್ರದ ದಶರಥ ಅನಿಲ ಜಾಧವ ಉತ್ತಮ ಆಕ್ರಮಣಕಾರಿ ಆಟಗಾರ ಪ್ರಶಸ್ತಿ ಪಡೆದುಕೊಂಡರು.ಬಾಲಕಿಯರ ವಿಭಾಗದಲ್ಲಿ ಕೇರಳದ ವರ್ಷಾ ಎನ್. ಉತ್ತಮ ರಕ್ಷಣಾತ್ಮಕ ಆಟಗಾರ್ತಿಯಾಗಿಯೂ ನವದೆಹಲಿಯ ಕೃಷ್ಣಾ ಯಾಧವ ಉತ್ತಮ ಆಕ್ರಮಣಕಾರಿಯಾಗಿಯೂ ಹೊರಹೊಮ್ಮಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry