ಕೊಕ್ಕೊ ಪಂದ್ಯಾವಳಿ; ಸೆಮಿಫೈನಲ್‌ಗೆ ಕೋಲಾರ

7

ಕೊಕ್ಕೊ ಪಂದ್ಯಾವಳಿ; ಸೆಮಿಫೈನಲ್‌ಗೆ ಕೋಲಾರ

Published:
Updated:

ಕೋಲಾರ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆರಂಭವಾದ ಬೆಂಗಳೂರು ವಿಶ್ವವಿದ್ಯಾಲಯದ ಅಂತರಕಾಲೇಜು ಕೊಕ್ಕೊ ಪಂದ್ಯಾವಳಿಯಲ್ಲಿ ತೀವ್ರ ಸೆಣೆಸಾಟದ ಬಳಿಕ ಅತಿಥೇಯ ಮಹಿಳಾ ಕಾಲೇಜು ಮತ್ತು ಬೆಂಗಳೂರಿನ ವಿವಿಎಸ್,ಮಹಾರಾಣಿ ಕಲಾ-ವಾಣಿಜ್ಯ ಕಾಲೇಜು ಹಾಗೂ ಬಿಎಂಎಸ್ ಕಾಲೇಜು ಸೆಮಿಫೈನಲ್ ಹಂತ ತಲುಪಿದವು.ಬೆಂಗಳೂರಿನ ಬಿಎಂಎಸ್ ಕಾಲೇಜು, ಎನ್‌ಎಂಕೆಆರ್‌ವಿ ಕಾಲೇಜು, ಚಿತ್ರಕೂಟ ಕಲಾ ಪರಿಷತ್ತು, ವಿಜಯನಗರ ಕಾಲೇಜು, ಕೆ.ಆರ್.ಪುರಂ ಕಾಲೇಜು, ಸೆಂಟ್ ಜಾನ್ಸ್ ಕಾಲೇಜು, ಜ್ಯೋತಿನಿವಾಸ್ ಕಾಲೇಜು, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ರಾಮನಗರದ ಮಹಿಳಾ ಕಾಲೇಜು, ಗೌರಿಬಿದನೂರಿನ ಆಚಾರ್ಯ ಕಾಲೇಜು,  ಆಚಾರ್ಯ ಇನ್ಸ್‌ಟಿಟ್ಯೂಟ್ ಆಫ್ ಗ್ರ್ಯಾಜುಯೇಟ್ ಸೈನ್ಸ್, ಮಾಗಡಿಯ ಎಸ್‌ಇಎ ಕಾಲೇಜು, ವಿವಿಎನ್ ಕಾಲೇಜು, ಚಿಂತಾಮಣಿ, ಬಂಗಾರತಿರುಪತಿ, ಚಿಕ್ಕಬಳ್ಳಾಪುರ ,ಕೆಂಗೇರಿ, ದೊಡ್ಡಬಳ್ಳಾಪುರದ  ಸರ್ಕಾರಿ ಕಾಲೇಜುಗಳು, ಹಾಗೂ ಅತಿಥೇಯ ಮಹಿಳಾ ಕಾಲೇಜಿನ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.ಗ್ರಾಮಾಂತರ ಪ್ರದೇಶದ ಕಾಲೇಜುಗಳ ಕ್ರೀಡಾಪಟುಗಳಿಗೆ ಬೆಂಗಳೂರಿನ ಕ್ರೀಡಾಪಟುಗಳು ಹೆಚ್ಚು ಪೈಪೋಟಿ ಒಡ್ಡಿದ ಪರಿಣಾಮ ಪಂದ್ಯಾವಳಿಯು ರೋಚಕ ಸನ್ನಿವೇಶವನ್ನು ಮೂಡಿಸಿತ್ತು. ಬುಧವಾರ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಜೇತರಾಗುವ ಎರಡು ತಂಡಗಳ ನಡುವೆ ಅಂತಿಮ ಹಣಾಹಣಿ ಏರ್ಪಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry