ಕೊಚ್ಚಿಹೋದ ಇಬ್ಬರು: ಆಹಾರಕ್ಕಾಗಿ ಪರದಾಟ

7
ಧಾರಾಕಾರ ಮಳೆಗೆ ಸೇಡಂ ತತ್ತರ

ಕೊಚ್ಚಿಹೋದ ಇಬ್ಬರು: ಆಹಾರಕ್ಕಾಗಿ ಪರದಾಟ

Published:
Updated:
ಕೊಚ್ಚಿಹೋದ ಇಬ್ಬರು: ಆಹಾರಕ್ಕಾಗಿ ಪರದಾಟ

ಸೇಡಂ: ಸೇಡಂನಲ್ಲಿ ಮಂಗಳವಾರ ಸಂಜೆ ಸುಮಾರಿಗೆ ಪ್ರಾರಂಭವಾಗಿ 3 ಗಂಟೆಗಳ ಕಾಲ ಧಾರಾಕಾರ ಸುರಿದ ಮಳೆಯಿಂದ ಇಲ್ಲಿನ ಹಲವಾರು ಬಡಾವಣೆಗಳು ಜಲಾವೃತಗೊಂಡಿವೆ. ಪೂರೈಕೆಯಲ್ಲಿನ ವ್ಯತ್ಯಯ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿತ್ತು.



ಪಟ್ಟಣದ ಕೋಡ್ಲಾ ಕ್ರಾಸ್, ಬಸವನಗರ ತಾಂಡಾ, ಚೋಟಿಗಿರಣಿ ತಾಂಡಾ, ರೆಹಮತ ನಗರ, ಇಂದಿರಾನಗರ ಬಡಾವಣೆ ಸೇರಿದಂತೆ ವಿವಿಧೆಡೆಯ ಬಡಾವಣೆಗಳ ಮನೆಗಳು ಜಲಾವೃತಗೊಂಡಿದ್ದು ಜನತೆ ತೀವ್ರ ತೊಂದರೆ ಅನುಭವಿಸಿದರು.



ಹಲವಾರು ಮನೆಗಳಲ್ಲಿ ಮಳೆ ನೀರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಆಹಾರ ಧಾನ್ಯ ಹಾಳಾಗಿದೆ, ಕೆಲವೆಡೆ ಕೋಳಿಗಳೂ ಕೊಚ್ಚಿಕೊಂಡು ಹೋಗಿವೆ.



ಬಡವರೆ ಹೆಚ್ಚಾಗಿರುವ ಇಲ್ಲಿನ ಕೋಡ್ಲಾ ಕ್ರಾಸ್, ಬಸವನಗರ ತಾಂಡಾಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಒಲೆ ಹಚ್ಚಲು ಆಗದೆ, ಇತ್ತ ಹೊರಗೆ ಹೋಗಿ ಊಟ ಮಾಡಲು ಆಗದೆ ಪರಿತಪಿಸುತ್ತಿರುವುದು ಮತ್ತು ಚಿಕ್ಕ ಮಕ್ಕಳು ಹೆದರಿಕೆ ಮತ್ತು ಹಸಿವಿನಿಂದ ಬಳಲುತ್ತಿರುವುದು ಕಂಡುಬಂದಿತು.

ಇಲ್ಲಿನ ನೃಪತುಂಗ ಕಾಲೇಜಿನ ರಸ್ತೆಯ ಸಮೀಪದಲ್ಲಿ ಹರಿಯುವ ಹೊಲದ ನಾಲೆಯಲ್ಲಿ ಊಡಗಿ ಗ್ರಾಮದ ಖಯ್ಯುಮ ಪಟೇಲ, ಮರೆಪ್ಪ ಕೊಚ್ಚಿಹೋಗಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಪರಶುರಾಮ ವನಂಜಕರ ತಿಳಿಸಿದ್ದಾರೆ.



ಮಳೆಯ ಆರ್ಭಟದಿಂದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಮುಖ್ಯ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಆಟೊ, ಮೋಟಾರ್ ಸೈಕಲ್ ಗಳು ನೀರಲ್ಲಿ ಸಿಕ್ಕಿ ಹಾಕಿಕೊಂಡಿವೆ. ಮಳೆಯಿಂದ ಕಂಗೆಟ್ಟಿದ್ದ ಜನರಿಗೆ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತು.



ಹಲವಾರು ಮನೆಗಳು ಜಲಾವೃತ ವಾಗಿರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಗಳಿಗೆ ಧಕ್ಕೆಯಾಗಿದೆ. ಕಡು ಬಡವರಿಗೆ ಪರಿಹಾರ ನೀಡಬೇಕು ಎಂದು ಕೋಡ್ಲಾ ಕ್ರಾಸ್ ನಿವಾಸಿ ಲಾಲು ರಾಠೋಡ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry