ಕೊಡಗನೂರು: ಕಳುವಾಗಿದ್ದ ಹುಂಡಿ ಪತ್ತೆ

7

ಕೊಡಗನೂರು: ಕಳುವಾಗಿದ್ದ ಹುಂಡಿ ಪತ್ತೆ

Published:
Updated:
ಕೊಡಗನೂರು: ಕಳುವಾಗಿದ್ದ ಹುಂಡಿ ಪತ್ತೆ

ಮಾಯಕೊಂಡ: ಸಮೀಪದ ಕೊಡಗನೂರು ಗ್ರಾಮದಲ್ಲಿ ಮಂಗಳವಾರ ಕಳುವಾಗಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಪಕ್ಕದ ಮಂಜುನಾಥ ಎಂಬುವವರ ಜಮೀನಿನಲ್ಲಿ ಬುಧವಾರ ಪತ್ತೆಯಾಗಿದೆ. ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹುಂಡಿಯನ್ನು ಹೊಡೆದು ಹಣ ದೋಚಲು ಯತ್ನಿಸಿದ್ದರೂ ಹುಂಡಿಯನ್ನು ಒಡೆಯಲು ಸಾಧ್ಯವಾಗಿಲ್ಲ.ಇಂದು ಬೆಳಿಗ್ಗೆ ಪೊಲೀಸರು ಗ್ರಾಮಸ್ಥರೊಂದಿಗೆ ಹುಡುಕಾಟ ನಡೆಸುತ್ತಿದ್ದಾಗ ಜಮೀನಿನಲ್ಲಿ ಹುಂಡಿ ಪತ್ತೆಯಾಗಿದೆ.

ಡಿವೈಎಸ್ಪಿ ಕವಳಪ್ಪ, ತಹಶೀಲ್ದಾರ್ ಮಂಜುನಾಥ ಬಳ್ಳಾರಿ, ಮಾಯಕೊಂಡ ಸಬ್ ಇನ್‌ಸ್ಪೆಕ್ಟರ್ ಸುರೇಶ್, ಉಪ ತಹಶೀಲ್ದಾರ್ ರಾಮಣ್ಣ ಸ್ಥಳಕ್ಕೆ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry