ಕೊಡಗಿನಲ್ಲಿಯೇ ಕಾಣೆಯಾದ ಮುಂಗಾರು!

7

ಕೊಡಗಿನಲ್ಲಿಯೇ ಕಾಣೆಯಾದ ಮುಂಗಾರು!

Published:
Updated:
ಕೊಡಗಿನಲ್ಲಿಯೇ ಕಾಣೆಯಾದ ಮುಂಗಾರು!

ಮಡಿಕೇರಿ: ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಕೊಡಗಿಗೆ ಪ್ರವೇಶಿ ಸುತ್ತಿದ್ದ ಮುಂಗಾರು ಮಳೆ ಜೂನ್ ತಿಂಗಳ ಕೊನೆಯ ವಾರ ಬಂದರೂ ಮಳೆಗಾಲದ ವಾತವರಣ ಕಂಡು ಬರುತ್ತಿಲ್ಲ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮುಂಗಾರು ಮಳೆ ಮೇ ತಿಂಗಳಿನಲ್ಲಿಯೇ ಆರಂಭ ವಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಜೂನ್ ತಿಂಗಳಿನ ಮೊದಲನೇ ವಾರದಲ್ಲಿ ಮಳೆ ಆರಂಭವಾಗಿದ್ದು, ಉತ್ತಮ ಮಳೆಯಾಗುವ ಭರವಸೆ ಇತ್ತು.ಆದರೆ ಜೂನ್ ತಿಂಗಳ ಕಡೆಯ ದಿನ ಬಂದರೂ ಗುಡುಗು ಮಿಂಚಿನ ಆರ್ಭಟ ದೊಂದಿಗೆ ವಾಡಿಕೆಯಂತೆ ಆಗುತ್ತಿದ್ದ ಮಳೆ ಈ ಬಾರಿ ಸುರಿದಿಲ್ಲ, ಬಹಳ ವರ್ಷಗಳ ನಂತರ ಕೊಡಗಿನಲ್ಲಿ ಮುಂಗಾರು ಕಣ್ಣಾಮುಚ್ಚಾಲೆ ಯಾಡುತ್ತಿದ್ದು, ಜಿಲ್ಲೆಯ ರೈತರು ಚಿಂತೆ ಪಡುವ ಪರಿಸ್ಥಿತಿ ಉಂಟಾಗಿದೆ.ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಆಗಾಗ ತುಂತುರು ಮಳೆಯಾಗುತ್ತಿದ್ದು, ನಿರಸ ವಾತಾವರಣ ಉಂಟಾಗಿದೆ. ಈ ತುಂತುರು ಮಳೆ ನಂಬಿ ಯಾವುದೇ ಕೃಷಿ ಚಟುವಟಿಕೆ ಯನ್ನು ಸರಾಗವಾಗಿ ನಡೆಸಲು ಸಾಧ್ಯ ವಾಗದೇ ರೈತ ವರ್ಗ ಕೈಕಟ್ಟಿ ಕೂರುವಂತಾಗಿದೆ. ಮಡಿಕೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಇದೆ.ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 2.54ಮಿ.ಮೀ. ಮಳೆಯಾಗಿದೆ. ಜನವರಿ ಯಿಂದ ಇಲ್ಲಿಯವರೆಗಿನ ಮಳೆ 460.39ಮಿ.ಮೀ. ಮಳೆ ದಾಖಲಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ 3.95ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 1.33ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆ 2.35ಮಿ.ಮೀ. ನಷ್ಟು ಗುರುವಾರ ಸರಾಸರಿ ಮಳೆಯಾಗಿದೆ.ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಸಂಪಾಜೆ 7.60 ಮಿ.ಮೀ., ಭಾಗಮಂಡಲ 3.20 ಮಿ.ಮೀ., ಹುದಿಕೇರಿ 3 ಮಿ.ಮೀ., ಶ್ರಿಮಂಗಲ 5 ಮಿ.ಮೀ., ಪೊನ್ನಂಪೇಟೆ 9.33 ಮಿ.ಮೀ., ಶನಿವಾರಸಂತೆ 3 ಮಿ.ಮೀ., ಶಾಂತಳ್ಳಿ 3.20 ಮಿ.ಮೀ., ಕೊಡ್ಲಿಪೇಟೆ 3.20 ಮಿ.ಮೀ., ಕುಶಾಲನಗರ 3 ಮಿ.ಮೀ. ಮಳೆಯಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ:

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2811.44ಅಡಿಗಳು. ಹಾರಂಗಿ ಪ್ರದೇಶದಲ್ಲಿ ಇಂದಿನ ಸರಾಸರಿ ಮಳೆ 2.60ಮಿ.ಮೀ. ಮಳೆಯಾಗಿದೆ. ಇಂದಿನ ನೀರಿನ ಒಳ ಹರಿವು 290 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 6761 ಕ್ಯೂಸೆಕ್ ಆಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry