ಕೊಡಗಿನಲ್ಲಿ ಬಿರುಮಳೆ

ಬುಧವಾರ, ಜೂಲೈ 17, 2019
30 °C

ಕೊಡಗಿನಲ್ಲಿ ಬಿರುಮಳೆ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವೇಶಿಸಿರುವ ಮುಂಗಾರು ಮಳೆಯು ದಿನ ಕಳೆದಂತೆ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಜಿಲ್ಲೆಯಾದ್ಯಂತ ಸೋಮವಾರ ಸರಾಸರಿ 26.92ಮಿ.ಮೀ. ಮಳೆ ಯಾಗಿದೆ. ಕಳೆದ ವರ್ಷ ಇದೇ ದಿನ 7.45ಮಿ.ಮೀ. ನಷ್ಟು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆ 403.54 ಮಿ.ಮೀ. ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 230.47 ಮಿ.ಮೀ ಮಳೆ ದಾಖಲಾಗಿತ್ತು.ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 33 ಮಿ.ಮೀ. ಮಳೆ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.70 ಮಿ.ಮೀ. ಮಳೆಯಾಗಿತ್ತು. ಜನವರಿ ಯಿಂದ ಇಲ್ಲಿಯವರೆಗೆ 487.70 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 298.04 ಮಿ.ಮೀ. ಮಳೆಯಾಗಿತ್ತು.ವಿರಾಜಪೇಟೆ ತಾಲ್ಲೂಕಿನಲ್ಲಿ 38.70 ಮಿ.ಮೀ. ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.35 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 8.05ಮಿ.ಮೀ. ಮಳೆ ಸುರಿದಿದೆ.ಹೋಬಳಿವಾರು ಮಳೆಯ ವಿವರ: ಮಡಿಕೇರಿ ಕಸಬಾ 20 ಮಿ.ಮೀ, ನಾಪೋಕ್ಲು 19.60 ಮಿ.ಮೀ, ಸಂಪಾಜೆ 20 ಮಿ.ಮೀ, ಭಾಗಮಂಡಲ 72.40 ಮಿ.ಮೀ, ವೀರಾಜಪೇಟೆ ಕಸಬಾ 51.60 ಮಿ.ಮೀ, ಹುದಿಕೇರಿ 66.50 ಮಿ.ಮೀ, ಶ್ರೀಮಂಗಲ 18.60 ಮಿ.ಮೀ, ಪೊನ್ನಂಪೇಟೆ 60.20 ಮಿ.ಮೀ, ಅಮ್ಮತ್ತಿ 20.30 ಮಿ.ಮೀ, ಬಾಳಲೆ 15 ಮಿ.ಮೀ, ಸೋಮವಾರಪೇಟೆ ಕಸಬಾ 5.20 ಮಿ.ಮೀ, ಶನಿವಾರಸಂತೆ 9.20 ಮಿ.ಮೀ, ಶಾಂತಳ್ಳಿ 18.40 ಮಿ.ಮೀ, ಕುಶಾಲನಗರ 2ಮಿ.ಮೀ, ಕೊಡ್ಲಿಪೇಟೆ 10.30 ಮಿ.ಮೀ, ಸುಂಟಿಕೊಪ್ಪ 9.20 ಮಿ.ಮೀ. ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry