ಭಾನುವಾರ, ಮಾರ್ಚ್ 7, 2021
18 °C

ಕೊಡಗಿನಲ್ಲಿ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗಿನಲ್ಲಿ ಬಿರುಸಿನ ಮಳೆ

ಬೆಂಗಳೂರು: ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಗಾಳಿ ಸಹಿತ ಬಿರುಸಿನ ಮಳೆಯಾಗಿದೆ.ನಾಪೋಕ್ಲು, ಭಾಗಮಂಡಲ, ತಲಕಾವೇರಿಯಲ್ಲೂ ಉತ್ತಮ ಮಳೆ ಬೀಳುತ್ತಿದೆ. ಹೀಗಾಗಿ, ಕೆಲ ದಿನಗಳ ಬಳಿಕ ಕಾವೇರಿ ನದಿಮಟ್ಟದಲ್ಲಿ ತುಸು ಏರಿಕೆ ಕಂಡಿದೆ. ಮಡಿಕೇರಿ, ಕೆ.ನಿಡುಗಣಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೋರು ಮಳೆಯಾಗಿದ್ದು, ಹಾರಂಗಿ ಒಳಹರಿವು 7,643 ಕ್ಯುಸೆಕ್‌ಗೆ ಏರಿದೆ.ಎಲ್ಲ ಸೇತುವೆಗಳೂ ಸಂಚಾರಕ್ಕೆ ಮುಕ್ತ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕೃಷ್ಣಾ ಹಾಗೂ ದೂಧಗಂಗಾ ನದಿ ನೀರಿನ ಮಟ್ಟ ಕಡಿಮೆಯಾಗಿದೆ.ಚಿಕ್ಕೋಡಿ ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಮುಳುಗಡೆ ಸ್ಥಿತಿಯಲ್ಲಿದ್ದ ಕಲ್ಲೋಳ– ಯಡೂರ ಸೇತುವೆಯೂ ಮಂಗಳವಾರ ಸಂಚಾರಕ್ಕೆ ಮುಕ್ತವಾಗಿದೆ. ಇದರೊಂದಿಗೆ ಜಿಲ್ಲೆಯ ಎಲ್ಲ ಸೇತುವೆಗಳು ಸಂಚಾರಕ್ಕೆ ಮುಕ್ತವಾದಂತಾಗಿದೆ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 36,416 ಕ್ಯುಸೆಕ್‌ ಹಾಗೂ ದೂಧಗಂಗಾ ನದಿಗೆ 4,928 ಕ್ಯುಸೆಕ್‌ ಸೇರಿದಂತೆ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 41,344 ಕ್ಯುಸೆಕ್‌ ನೀರು ಹರಿದುಬರುತ್ತಿದೆ.ಹುಲಿಕಲ್‌ನಲ್ಲಿ 7 ಸೆಂ.ಮೀ. ಮಳೆ: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಹುಲಿಕಲ್ 7, ಕಾರ್ಕಳ 6, ಮಡಿಕೇರಿ, ಆಗುಂಬೆ 5, ಮಂಗಳೂರು, ಬೆಳ್ತಂಗಡಿ, ಭಾಗಮಂಡಲ 4, ಪಣಂಬೂರು, ಮೂಡುಬಿದಿರೆ, ಬಂಟ್ವಾಳ, ಧರ್ಮಸ್ಥಳ, ಸುಳ್ಯ, ಉಡುಪಿ, ಕೋಟ, ಕಾರವಾರ, ಮಾದಾಪುರ, ಲಿಂಗನಮಕ್ಕಿ 3 ಸೆಂ.ಮೀ ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.