ಕೊಡಗಿನಲ್ಲಿ ಮುಂಗಾರು ಕ್ಷೀಣ

ಬುಧವಾರ, ಜೂಲೈ 17, 2019
29 °C

ಕೊಡಗಿನಲ್ಲಿ ಮುಂಗಾರು ಕ್ಷೀಣ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಬುಧವಾರ ಮುಂಗಾರು ಮಳೆ ಕ್ಷೀಣಗೊಂಡಿದೆ. ಜಿಲ್ಲೆಯಾದ್ಯಂತ ಸರಾಸರಿ 35.36 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.49ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 623.14ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 995.21ಮಿ.ಮೀ ಮಳೆ ದಾಖಲಾಗಿತ್ತು.



ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 46.10ಮಿ.ಮೀ. ಕಳೆದ ವರ್ಷ ಇದೇ ದಿನ 5.15ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 862.12ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 1315.40ಮಿ. ಮೀ.ಮಳೆಯಾಗಿತ್ತು.



ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 36.05ಮಿ.ಮೀ. ಕಳೆದ ವರ್ಷ ಇದೇ ದಿನ 4.45ಮಿ.ಮೀ. ಜನವರಿುಂದ ಇಲ್ಲಿಯವರೆಗಿನ ಮಳೆ 533.68 ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 1061.46 ಮಿ.ಮೀ. ಮಳೆಯಾಗಿತ್ತು.



ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.93 ಮಿ.ಮೀ. ಕಳೆದ ವರ್ಷ ಇದೇ ದಿನ 6.87ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 473.63 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 608.69ಮಿ.ಮೀ. ಮಳೆಯಾಗಿತ್ತು.



ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:- ಮಡಿಕೇರಿ ಕಸಬಾ 3.80, ನಾಪೋಕ್ಲು 39.40, ಸಂಪಾಜೆ 11, ಭಾಗ ಮಂಡಲ 130.20, ವಿರಾಜಪೇಟೆ ಕಸಬಾ 12.60, ಹುದಿಕೇರಿ 61.20, ಶ್ರೀಮಂಗಲ 63, ಪೊನ್ನಂಪೇಟೆ 18.40, ಅಮ್ಮತಿ 24.10, ಬಾಳೆಲೆ 37, ಸೋಮವಾರಪೇಟೆ ಕಸಬಾ 15.20, ಶನಿವಾರಸಂತೆ 28.20, ಶಾಂತಳ್ಳಿ 78.40, ಕೊಡ್ಲಿಪೇಟೆ 19, ಕುಶಾಲನಗರ 0.40, ಸುಂಟಿಕೊಪ್ಪ 2.40ಮಿ.ಮೀ ಮಳೆಯಾಗಿದೆ.



ಹಾರಂಗಿ ಜಲಾಶಯದ ನೀರಿನ ಮಟ್ಟ:
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ 2817.38 ಅಡಿಗಳು (ಗರಿಷ್ಠ ಮಟ್ಟ 2,859 ಅಡಿಗಳು). ಕಳೆದ ವರ್ಷ ಇದೇ ದಿನ 2855.94ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 3.20ಮಿ.ಮೀ., ಕಳೆದ ವರ್ಷ ಹಾರಂಗಿಯಲ್ಲಿ ಬಿದ್ದ ಮಳೆ 2.20ಮಿ.ಮೀ. ಇಂದಿನ ನೀರಿನ ಒಳ ಹರಿವು 1331 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1469ಕ್ಯೂಸೆಕ್.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry