ಕೊಡಗಿನಲ್ಲಿ ಸಾಧಾರಣ ಮಳೆ

ಬುಧವಾರ, ಜೂಲೈ 17, 2019
29 °C

ಕೊಡಗಿನಲ್ಲಿ ಸಾಧಾರಣ ಮಳೆ

Published:
Updated:

ಮಡಿಕೇರಿ: ಜಿಲ್ಲೆಯಲ್ಲಿ ಶನಿವಾರ ಸಾಧಾರಣವಾಗಿ ಮುಂಗಾರು ಸುರಿದಿದೆ. ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆ 12.55ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 487.35ಮಿ.ಮೀ. ಮಳೆಯಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.40ಮಿ.ಮೀ., ಕಳೆದ ವರ್ಷ ಇದೇ ದಿನ 4.70ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 668.67ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1270.10ಮಿ.ಮೀ. ಮಳೆಯಾಗಿತ್ತು.ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.08ಮಿ.ಮೀ., ಕಳೆದ ವರ್ಷ ಇದೇ ದಿನ 1.02ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 403.28ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1017.89 ಮಿ.ಮೀ. ಮಳೆಯಾಗಿತ್ತು.  ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 10.18ಮಿ.ಮೀ., ಕಳೆದ ವರ್ಷ ಇದೇ ದಿನ 3.95ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 390.10ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 581.69ಮಿ.ಮೀ. ಮಳೆಯಾಗಿತ್ತು.ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 11, ನಾಪೋಕ್ಲು 10.20, ಸಂಪಾಜೆ 15.20, ಭಾಗಮಂಡಲ 25.20, ವಿರಾಜಪೇಟೆ ಕಸಬಾ 6.60, ಹುದಿಕೇರಿ 23.90, ಶ್ರಿಮಂಗಲ 10.20, ಪೊನ್ನಂಪೇಟೆ 15.60, ಅಮ್ಮತಿ 8.20, ಬಾಳೆಲೆ 10, ಶನಿವಾರಸಂತೆ 19, ಶಾಂತಳ್ಳಿ 21.20, ಕೊಡ್ಲಿಪೇಟೆ 8.40, ಸುಂಟಿಕೊಪ್ಪ 9.80ಮಿ.ಮೀ ಮಳೆಯಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ:  ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2812.56ಅಡಿಗಳು, ಕಳೆದ ವರ್ಷ ಇದೇ ದಿನ 2854.35ಅಡಿ. ಹಾರಂಗಿಯ ಸುತ್ತಮುತ್ತಲ ಪ್ರದೇಶದಲ್ಲಿ ಬಿದ್ದ ಮಳೆ 5.80ಮಿ.ಮೀ., ಇಂದಿನ ನೀರಿನ ಒಳ ಹರಿವು 549 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2432ಕ್ಯೂಸೆಕ್ ಆಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry