ಕೊಡಗಿನಲ್ಲಿ 14 ಮಕ್ಕಳ ಜನನ

7
12.12.12ರ ವಿಶೇಷ

ಕೊಡಗಿನಲ್ಲಿ 14 ಮಕ್ಕಳ ಜನನ

Published:
Updated:

ಮಡಿಕೇರಿ: ಈ ಶತಮಾನದ ಅತ್ಯಂತ ವಿಶಿಷ್ಟ ಸಂಖ್ಯೆ 12.12.12 ರಂದು (ಬುಧವಾರ) ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 14 ಮಕ್ಕಳು ಜನ್ಮತಾಳಿವೆ. ಇವುಗಳಲ್ಲಿ ಕೆಲವು ಸ್ವಾಭಾವಿಕ ಹೆರಿಗೆಯಾಗಿದ್ದರೆ, ಇನ್ನು ಕೆಲವು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿವೆ.

ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಐದು ಮಕ್ಕಳು ಜನ್ಮ ತಾಳಿದವು. ಇದರಲ್ಲಿ ಮೂರು ಮಕ್ಕಳು ಶಸ್ತ್ರಚಿಕಿತ್ಸೆ ಮೂಲಕ ಜನ್ಮ ತಾಳಿವೆ. ಮಡಿಕೇರಿ ತಾಲ್ಲೂಕಿನ ಹಾಕತ್ತೂರಿನ ಮಂಜುಳಾ, ಕಾಟಕೇರಿಯ ಒಲಿವಿಯಾ ಶಿಲ್ಪಾ ಲೋಬೋ, ಸೋಮವಾರಪೇಟೆ ತಾಲ್ಲೂಕಿನ ಮದೆಗೋಡು ಗ್ರಾಮದ ಸಿ.ಕೆ. ಶೋಭಾ, ಶಿವರಳ್ಳಿ ಗ್ರಾಮದ ಎಸ್.ಪಿ. ಜಯಲಕ್ಷ್ಮೀ ಹಾಗೂ ಕುಶಾಲನಗರದ ನೇತ್ರಾವತಿ ತಮ್ಮ ವಂಶದ ಕುಡಿಗೆ ಜನ್ಮ ನೀಡಿದರು.ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಬೆಲ್ಲೂರು ಗ್ರಾಮದ ಅಯೇಷಾ, ಮೈತಾಡಿ ಗ್ರಾಮದ ಬಿ.ಆರ್. ಕುಸುಮಾ, ಹೆಗ್ಗಳ ಗ್ರಾಮದ ಪ್ರಿಯಾ, ಪೊನ್ನಂಪೇಟೆಯ ರೇಖಾ, ಅರವತ್ತೊಕ್ಲು ಗ್ರಾಮದ ವಂದನಾ ಅವರು ಕಂದಮ್ಮಗಳಿಗೆ ಜನ್ಮ ನೀಡಿದರು.ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಂಗಾಲದ ಕೆ.ಎಂ. ದಿವ್ಯಾ, ಬಿಳಗುಂದ ಗ್ರಾಮದ ಸುಮಯಾ, ನರಿಯಂಡಂಡ ಗ್ರಾಮದ ಬಿ.ಎಸ್. ಗೀತಾ ಅವರು ತಾಯಿಯಾಗಿ ಸಂಭ್ರಮಪಟ್ಟರು.ವಿಶಿಷ್ಟ ದಿನವಾದ 12.12.12ರಂದು ಜನ್ಮಪಡೆದ ಮಕ್ಕಳು ಹಾಗೂ ಜನ್ಮ ನೀಡಿದ ತಾಯಂದಿರರು ಆರೋಗ್ಯದಿಂದ ಇದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry