ಭಾನುವಾರ, ಮೇ 9, 2021
19 °C

ಕೊಡಗಿನ್ಲ್ಲಲಿ ಸಕಾಲಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ನಾಗರಿಕ ಸೇವಾ ಖಾತರಿ ಕಾಯ್ದೆ-2011(`ಸಕಾಲ~)ಇಂದಿನಿಂದ ಜಾರಿಯಾಗಿದೆ. ಮಡಿಕೇರಿ ತಾಲ್ಲೂಕು ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮತ್ತು ಜಿಲ್ಲಾಧಿಕಾರಿ ಡಾ.ಎನ್. ವಿ.ಪ್ರಸಾದ್  `ಸಕಾಲ~ ಕ್ಕೆ ಚಾಲನೆ ನೀಡಿದರು.ಎಂ.ಸಿ.ನಾಣಯ್ಯ ಮಾತನಾಡಿ, ಇದೊಂದು ಮಹತ್ವದ ಕಾಯ್ದೆಯಾಗಿದ್ದು, ನಿಗದಿತ ಅವಧಿಯೊಳಗೆ ಸಾರ್ವಜನಿಕರು ಸರ್ಕಾರದ ನಿರ್ದಿಷ್ಟ ಸೇವೆ ಪಡೆಯುವ ಹಕ್ಕನ್ನು ಖಾತರಿ ಪಡಿಸಿಕೊಳ್ಳಲು ಅವಕಾಶ ದೊರೆತಿದೆ ಎಂದರು.ಹಾಲಿ 11 ಪ್ರಮುಖ ಇಲಾಖೆಗಳಲ್ಲಿ ಲಭ್ಯವಾಗುವ 151 ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇತರ ಇಲಾಖೆಗಳ ಸೇವೆಗಳು ಸಹ ಇದಕ್ಕೆ ಸೇರ್ಪಡೆಯಾಗುವುದು ಖಚಿತ ಎಂದು ಹೇಳಿದರು. ಜಾತಿ, ಜನನ-ಮರಣ ಪ್ರಮಾಣ ಪತ್ರಗಳು, ನಾಗರಿಕ ಗುರುತಿನ ಚೀಟಿ, ಪಡಿತರ ಚೀಟಿ ಮತ್ತಿತರ ಸೇವೆಗಳನ್ನು ಕಾಲಾವಕಾಶದೊಳಗೆ ಪಡೆಯಲು   `ಸಕಾಲ~  ಸಹಕಾರಿ ಎಂದರು.ಬಲ್ಲಮಾವಟಿಯ ನಿತಿನ್ ಎಂಬುವವರು ಮಡಿಕೇರಿ ತಾಲ್ಲೂಕು ಕಚೇರಿಯಲ್ಲಿ  `ಸಕಾಲ~  ಕಾಯ್ದೆಯಡಿ ಪ್ರಥಮವಾಗಿ ಅರ್ಜಿ ಸಲ್ಲಿಸಿದರು.  ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ.ಎನ್. ವಿ.ಪ್ರಸಾದ್, ಕೆ.ಎಂ.ಚಂದ್ರೇಗೌಡ, ಬಸವರಾಜಪ್ಪ, ಬಾಬು ರವೀಂದ್ರನಾಥ ಪಟೇಲ್ ಸಭೆಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.