ಕೊಡಗಿ ಶಾಖೋತ್ಪನ್ನ ಸ್ಥಾವರಕ್ಕೆ ತೋಷಿಬಾ ಜೆಎಸ್‌ಡಬ್ಲ್ಯು ಜನರೇಟರ್

7

ಕೊಡಗಿ ಶಾಖೋತ್ಪನ್ನ ಸ್ಥಾವರಕ್ಕೆ ತೋಷಿಬಾ ಜೆಎಸ್‌ಡಬ್ಲ್ಯು ಜನರೇಟರ್

Published:
Updated:

ಚೆನ್ನೈ: ಕರ್ನಾಟಕದ ಕೂಡಗಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರದ ಮೊದಲ ಘಟಕಕ್ಕೆ,  800 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೂಪರ್ ಕ್ರಿಟಿಕಲ್ ಸ್ಟೀಮ್ ಟರ್ಬೈನ್ಸ್ ಮತ್ತು ಜನರೇಟರ್ಸ್ ಪೂರೈಸುವ ಗುತ್ತಿಗೆಯನ್ನು ತೋಷಿಬಾ ಜೆಎಸ್‌ಡಬ್ಲ್ಯು ಟರ್ಬೈನ್ ಆಂಡ್ ಜನರೇಟರ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮವು (ಎನ್‌ಟಿಪಿಸಿ) ಮಂಜೂರು ಮಾಡಿರುವ  ಈ ಗುತ್ತಿಗೆಯ ಮೊತ್ತವು ರೂ. 2,300 ಕೋಟಿಗಳಷ್ಟಿದೆ.

ತೋಷಿಬಾ ಜೆಎಸ್‌ಡಬ್ಲ್ಯು, ಇತ್ತೀಚೆಗಷ್ಟೇ, ಚೆನ್ನೈ ಸಮೀಪದ ಮಾನಾಲಿಯಲ್ಲಿ  ಮಧ್ಯಮ ಮತ್ತು ದೊಡ್ಡ ಗಾತ್ರದ ಟರ್ಬೈನ್ಸ್ ಮತ್ತು ಜನರೇಟರ್ಸ್‌ಗಳನ್ನು ತಯಾರಿಸುವ ಘಟಕಕ್ಕೆ ಚಾಲನೆ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಈ ಸ್ಥಾವರ ಉದ್ಘಾಟಿಸಿದ್ದರು.

`ಎನ್‌ಟಿಪಿಸಿ~ಯ ಈ ಗುತ್ತಿಗೆಯು ತೋಷಿಬಾ ಜೆಎಸ್‌ಡಬ್ಲ್ಯುದ ಈ ಹೊಸ ಘಟಕದ ಮೊದಲ ಬೇಡಿಕೆಯಾಗಿದೆ.  ಸ್ಟೀಮ್ ಟರ್ಬೈನ್ ಮತ್ತು ಜನರೇಟರ್ ಸಾಧನಗಳನ್ನು ಇಲ್ಲಿಯೇ ತಯಾರಿಸಿ ಪೂರೈಸಲಾಗುವುದು.ಜಪಾನ್‌ನಲ್ಲಿನ ಕಾವಾಸಕಿಯಲ್ಲಿನ ತೋಷಿಬಾ ಕೆಹಿನ್ ಪ್ರೊಡಕ್ಟ್ ಆಪರೇಷನ್ಸ್ ಸಹಯೋಗದಲ್ಲಿ ಈ ಟರ್ಬೈನ್ ಮತ್ತು ಜನರೇಟರ್‌ಗಳನ್ನು ತಯಾರಿಸಲಾಗುವುದು. ಟರ್ಬೈರ್ನ್ ಮತ್ತು ಜನರೇಟರ್‌ನ ಕೆಲ ಬಿಡಿಭಾಗಗಳನ್ನೂ ಜಪಾನ್‌ನಿಂದಲೇ ಆಮದು ಮಾಡಿಕೊಳ್ಳಲಾಗುವುದು. ಕೂಡಗಿ ವಿದ್ಯುತ್ ಸ್ಥಾವರಕ್ಕೆ ಇವುಗಳನ್ನು ಮುಂದಿನ ವರ್ಷ ಪೂರೈಸುವ ನಿರೀಕ್ಷೆ ಇದೆ.

ಸೂಪರ್ ಕ್ರಿಟಿಕಲ್ ಸ್ಟೀಮ್ ಟರ್ಬೈನ್ ಮತ್ತು ಜನರೇಟರ್‌ಗಳು,  ಗರಿಷ್ಠ ಪ್ರಮಾಣದ ದಕ್ಷತೆ ಮತ್ತು ಪರಿಸರಕ್ಕೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ವಿದ್ಯುತ್ ಉತ್ಪಾದಿಸಲು ನೆರವಾಗಲಿವೆ.ತೋಷಿಬಾ, ಈಗಾಗಲೇ ದೇಶದಲ್ಲಿನ ಇತರ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಿಗೆ 830 ಮೆಗಾವಾಟ್ ಸಾಮರ್ಥ್ಯದ 5 ಸೂಪರ್ ಕ್ರಿಟಿಕಲ್ ಸ್ಟೀಮ್ ಟರ್ಬೈನ್ ಮತ್ತು ಜನರೇಟರ್‌ಗಳನ್ನು ಪೂರೈಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry