ಶನಿವಾರ, ಮಾರ್ಚ್ 6, 2021
19 °C

ಕೊಡಗು: ಎರಡು ಕಾಡಾನೆಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗು: ಎರಡು ಕಾಡಾನೆಗಳ ಸಾವು

ಸಿದ್ದಾಪುರ (ಕೊಡಗು):  ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಆನೆಗಳು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಗುರುವಾರ ಬೆಳಿಗ್ಗೆ ಸಿದ್ದಾಪುರ ಸಮೀಪದ ಕಾಫಿ ತೋಟದಲ್ಲಿ ಕಾಡಾನೆಯೊಂದು ವಿದ್ಯುತ್ ಸ್ಪರ್ಶಕ್ಕೆ ಬಲಿಯಾದರೆ, ತಿತಿಮತಿ ಅರಣ್ಯ ವಲಯದ ಬಸವನಹಳ್ಳಿ ಗ್ರಾಮದ ದೇವಮಚ್ಚಿ ಅರಣ್ಯದೊಳಗೆ ಎರಡು ಆನೆಗಳ ನಡುವಿನ ಕಾದಾಟದಲ್ಲಿ ಸುಮಾರು 25 ವರ್ಷ ಪ್ರಾಯದ ಆನೆಯೊಂದು ಮೃತಪಟ್ಟಿದೆ.ಸಿದ್ದಾಪುರ ಸಮೀಪದ ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪೋರೇಷನ್ (ಬಿಬಿಟಿಸಿ)ಗೆ ಸೇರಿದ ಕಾಫಿ ತೋಟವೊಂದರಲ್ಲಿ ವಿದ್ಯುತ್ ತಂತಿ ತಗುಲಿ ಸುಮಾರು 35 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದೆ. ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳಗಿನ 5 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಫಿ ತೋಟದ ಮಾರ್ಗವಾಗಿ 11ಕೆ.ವಿ. ವಿದ್ಯುತ್ ತಂತಿ ಹಾದು ಹೋಗಿದ್ದು, ಈ ತಂತಿ ತೀರ ಕೆಳಗೆ ಇದ್ದುದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಅಪಾಯಕಾರಿಯಾಗಿದ್ದರೂ ತೋಟದ ಮಾಲೀಕರು, ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟುಸ್ವಾಮಿ ಮತ್ತು ಸಿಬ್ಬಂದಿ ಸೆಸ್ಕ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ರಂಗಸ್ವಾಮಿ ಇತರರು ಭೇಟಿ ನೀಡಿದ್ದರು.ಆನೆಗಳ ಕಾದಾಟ: ಮತ್ತೊಂದು ಪ್ರಕರಣದಲ್ಲಿ ತಿತಿಮತಿ ರಕ್ಷಿತಾರಣ್ಯದ ದೇವಮಚ್ಚಿ ಅರಣ್ಯದಲ್ಲಿ ಗುರುವಾರ ಆನೆಗಳ ನಡುವಿನ ಕಾದಾಟದಲ್ಲಿ ಸುಮಾರು 25ರ ಹರೆಯದ ಗಂಡಾನೆ ಮೃತಪಟ್ಟಿದೆ.

ಸಂಜೆ ವೇಳೆಗೆ ಎರಡೂ ಆನೆಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.