ಗುರುವಾರ , ಏಪ್ರಿಲ್ 15, 2021
27 °C

ಕೊಡಗು ಜಿಲ್ಲಾ ಉತ್ಸವ ಶೀಘ್ರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಡಿ ಉತ್ಸವ ಹಾಗೂ ಜಿಲ್ಲಾ ಉತ್ಸವ ನಡೆಸುವ ಕುರಿತು ಶೀಘ್ರ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ತಿಳಿಸಿದರು.ಬೆಳಗಾವಿಯಲ್ಲಿ ಮಾ. 11ರಿಂದ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕೊಡಗು  ಜಿಲ್ಲೆಯಿಂದ ಹಮ್ಮಿಕೊಂಡಿರುವ ‘ಕನ್ನಡ ತೇರು’ ಯಾನ ಕಾರ್ಯಕ್ರಮಕ್ಕೆ ಭಾಗಮಂಡಲದಲ್ಲಿ  ಭಾನುವಾರ ಚಾಲನೆ ನೀಡುವ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಗಡಿ ಉತ್ಸವವನ್ನು ಕೊಡಗಿನ ಗಡಿ ಭಾಗವಾದ ಕರಿಕೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಉತ್ಸವ ನಡೆಸಲು ಜಿಲ್ಲಾಡಳಿತದ ಬಳಿ 11 ಲಕ್ಷ ರೂಪಾಯಿ ಹಣ ಇದೆ. ಇದಲ್ಲದೆ, ರಾಜ್ಯ ಜಾನಪದ ಪರಿಷತ್ತು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದಲ್ಲಿ ಜಾನಪದ ಮೇಳ ಕೂಡ ನಡೆಸಲು ಮುಂದೆ ಬಂದಿದೆ. ಈ ಬಗ್ಗೆ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ, ಉತ್ಸವದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದರು.ಸ್ಥಳೀಯರನ್ನು ಕಡೆಗಣಿಸುವ ಯಾವುದೇ ಉದ್ದೇಶ ಜಿಲ್ಲಾಡಳಿತಕ್ಕೆ ಇಲ್ಲ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ನೋವಾಗಿದ್ದರೆ ಅದಕ್ಕಾಗಿ ಕ್ಷಮಿಸಬೇಕು. ಕನ್ನಡದ ತೇರು ಜನರ ತೇರಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಜನರ ಪಾಲುದಾರಿಕೆ ಕಡಿಮೆಯಾಗಬಾರದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.