ಮಂಗಳವಾರ, ಮಾರ್ಚ್ 9, 2021
23 °C

ಕೊಡಗು-ದ.ಕ: ರಕ್ಷಿತಾರಣ್ಯದಲ್ಲಿ ನಕ್ಸಲರು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗು-ದ.ಕ: ರಕ್ಷಿತಾರಣ್ಯದಲ್ಲಿ ನಕ್ಸಲರು ಪತ್ತೆ

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಭಾಗವಾದ ಸುಳ್ಯ ತಾಲ್ಲೂಕಿನ ಕಿರಿಭಾಗ ಮತ್ತು ಕಡಮಕಲ್ಲು ರಕ್ಷಿತಾರಣ್ಯದ ಸುಟ್ಟತ್ ಮಲೆಯ ಹರಳು ಕಲ್ಲು ದಂಧೆ ನಡೆಯುತ್ತಿದ್ದ ಸ್ಥಳದ ಸಮೀಪ ಮಡಿಕೇರಿ ಅರಣ್ಯ ವ್ಯಾಪ್ತಿಗೆ ಸೇರಿದ ಮೀಸಲು ಅರಣ್ಯದಲ್ಲಿ ಶುಕ್ರವಾರ ಹಗಲು ಗಸ್ತಿನಲ್ಲಿದ್ದ ಸುಳ್ಯ-, ಸುಬ್ರಹ್ಮಣ್ಯ ವಲಯದ ಅರಣ್ಯ ಸಿಬ್ಬಂದಿಗೆ ಆರು ಶಂಕಿತ ನಕ್ಸಲರು ಕಂಡುಬಂದಿದ್ದಾರೆ.ಬಂದೂಕು ಹಿಡಿದುಕೊಂಡಿದ್ದ ಇವರು ನಕ್ಸಲ್ ತಂಡದ ಸದಸ್ಯರು ಎಂದು ಅರಣ್ಯ ಸಿಬ್ಬಂದಿ ಗುರುತಿಸಿದ್ದಾರೆ. ತಂಡದಲ್ಲಿದ್ದ ಆರು ಮಂದಿಯಲ್ಲಿ ಇಬ್ಬರು ಮಹಿಳೆಯರು ಇದ್ದರು ಎಂದು ಅವರು ಹೇಳಿದ್ದಾರೆ.ಈ ಮಧ್ಯೆ, ಅವರು ನಕ್ಸಲೀಯರೇ ಅಥವಾ ನಕ್ಸಲೀಯರ ಮುಖವಾಡ ಧರಿಸಿ ಹರಳು ಕಲ್ಲು ದಂಧೆಗೆ ತೊಡಗಿದ ತಂಡದವರೇ ಎಂಬ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಅರಣ್ಯ ಸಿಬ್ಬಂದಿ ಪ್ರಕಾರ ಇದು ನಕ್ಸಲ್ ತಂಡವೇ ಆಗಿರುವ ಸಾಧ್ಯತೆ ಹೆಚ್ಚಿದೆ.ಶೋಧ ಕಾರ್ಯಾಚರಣೆ

ಶಂಕಿತ ನಕ್ಸಲರ ಸುಳಿವಿನ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ಸಿಬ್ಬಂದಿ ಶನಿವಾರದಿಂದ ಶೋಧ ಕಾರ್ಯಾಚರಣೆ ಚುರುಕುಗೊ­ಳಿಸಿದ್ದಾರೆ. ಮತ್ತೆ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಹೆಜ್ಜೆಗಳು ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.