ಕೊಡವೂರು: ಹಾಲು ಉತ್ಪಾದಕರ ಸಂಘದ ಸಭೆ

7

ಕೊಡವೂರು: ಹಾಲು ಉತ್ಪಾದಕರ ಸಂಘದ ಸಭೆ

Published:
Updated:

ಉಡುಪಿ: ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ಬಿ.ಗೋಪಾಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶಂಕರ ನಾರಾ ಯಣ ದೇವಸ್ಥಾನದ ಆವರಣದಲ್ಲಿ ನಡೆಯಿತು.2012--–13 ನೇ ಸಾಲಿನ ನಿವ್ವಳ ಲಾಭ 3,88,951 ರೂಪಾಯಿಯನ್ನು ವಿಂಗಡಿಸಿ ಉತ್ಪಾದಕರಿಗೆ 65 ಶೇಕಡ ಬೋನಸ್ ಹಾಗೂ ಸದಸ್ಯರಿಗೆ 15 ಶೇಕಡ ಡಿವಿಡೆಂಟ್ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.ಸದಸ್ಯರಿಗೆ 2013-–14 ನೇ ಸಾಲಿನಲ್ಲಿ 14 ವಿವಿಧ ಯೋಜನೆಗಳನ್ನು ನೀಡಲಾ ಗುವುದು ಎಂದು  ಸಭೆಯಲ್ಲಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಒಕ್ಕೂಟದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಆಡಳಿತ ಮಂಡಳಿ ಸದಸ್ಯರಾದ ಕೆ.ಟಿ.ಪೂಜಾರಿ, ಸೀತಾರಾಮ ರಾವ್, ಗೋಪಾಲ ಪೂಜಾರಿ, ಇಂದಿರಾ ಶೆಡ್ತಿ, ಅಣ್ಣಪ್ಪ ಶೆಟ್ಟಿ, ಜಯಂತಿ, ಮೋಹಿನಿ, ಎಂ.ಲೀಲ ಉಪಸ್ಥಿತರಿದ್ದರು. ಪುಷ್ಪಾವತಿ, ಸುಧಾ, ಸುಮಿತ್ರ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಕೆ. ರಾಮಶೇರಿಗಾರ್‌ ವಾರ್ಷಿಕ ವರದಿ ವಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry