ಗುರುವಾರ , ಮೇ 26, 2022
30 °C

ಕೊಡವ ನಮೂದಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಫೆ. 9 ರಿಂದ 28ರ ವರೆಗೆ ನಡೆಯಲಿರುವ 2011ನೇ ಸಾಲಿನ ಜನಗಣತಿ ಸಂದರ್ಭದಲ್ಲಿ ಕೊಡವ ಸಮುದಾಯದ ನಿರ್ದಿಷ್ಟ ಕುಟುಂಬದ ಹೆಸರು ಹಾಗೂ ಮಾತೃಭಾಷೆ ಕಾಲಂನಲ್ಲಿ ‘ಕೊಡವ ತಕ್ಕ್’ ಎಂದು ದಾಖಲಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅವರನ್ನು ಭೇಟಿ ಮಾಡಿದ್ದ ನಿಯೋಗವು ವ್ಯಕ್ತಿಯ ಕಾಲಂನಲ್ಲಿ ಕೊಡವ ಸಮುದಾಯದ ಇಂತಹ ಕುಟುಂಬ (ಒಕ್ಕ)ಕ್ಕೆ ಸೇರಿದವರೆಂದು ದಾಖಲಿಸಬೇಕು. ಅಲ್ಲದೆ, ಧರ್ಮದ ಕಾಲಂನಲ್ಲಿ ‘ಕೊಡವ’ ಹಾಗೂ ಮಾತೃ ಭಾಷೆ ಕಾಲಂನಲ್ಲಿ ‘ಕೊಡವ ತಕ್ಕ್’ ಎಂದು ದಾಖಲಿಸಬೇಕು ಎಂದು ಒತ್ತಾಯಿಸಿತು.ಜನಗಣತಿ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು. ಜನಗಣ ತಿಯಲ್ಲಿ ‘ಕೊಡವ’ ಎಂದು ನಮೂದಿ ಸದಿದ್ದಲ್ಲಿ ಅದು ಮಾನವ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.