ಬುಧವಾರ, ನವೆಂಬರ್ 20, 2019
26 °C

ಕೊಡವ ಸಾಕ್ಷ್ಯಚಿತ್ರದ ಸಿ.ಡಿ ಬಿಡುಗಡೆ

Published:
Updated:

ಬೆಂಗಳೂರು: `ಕೊಡವ ಸಾಹಿತ್ಯ ಕಲೆ ಪರಿಷತ್ತು' ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡವ ಭಾಷೆಗೆ ಡಬ್ ಮಾಡಲಾಗಿರುವ `ನೇತ್ರಾವತಿ' ಸಾಕ್ಷ್ಯಚಿತ್ರದ ಸಿ.ಡಿ ಮತ್ತು ಡಿ.ವಿ.ಡಿ.ಗಳನ್ನು ಬಿಡುಗಡೆ ಮಾಡಲಾಯಿತು.ಪರಿಷತ್‌ನ ಅಧ್ಯಕ್ಷ ಸೋಮೆಯಂಡ ಬೋಸು ಬೆಳ್ಳಿಯಪ್ಪ ಮಾತನಾಡಿ, ಕನ್ನಡದಲ್ಲಿ ರವಿಕಿರಣ್ ಅವರು ನಿರ್ದೇಶಿಸಿರುವ `ನೇತ್ರಾವತಿ' ಸಾಕ್ಷ್ಯಚಿತ್ರವನ್ನು ಕೊಡವ ಭಾಷೆಗೆ ಡಬ್ ಮಾಡಲಾಗಿದೆ ಎಂದರು.ಕೊಡವ ಭಾಷೆಯಲ್ಲಿ ಸಾಕಷ್ಟು ಸಾಕ್ಷ್ಯಚಿತ್ರಗಳು, ಧಾರಾವಾಹಿಗಳು ಬರುತ್ತಿವೆ. ಆದರೆ, ಭಾಷೆಯ ಕಾರಣಕ್ಕಾಗಿ ಕೊಡವ ಸಾಕ್ಷ್ಯಚಿತ್ರಗಳು ಹೆಚ್ಚು ಜನರನ್ನು ತಲುಪುತ್ತಿಲ್ಲ. ಪ್ರೇಕ್ಷಕರು ಇತರ ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಿದಂತೆ ಕೊಡವ ಭಾಷೆಯ ಚಿತ್ರಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ನಟ ಕುಶಾಲಪ್ಪ ಮಾತನಾಡಿ, ಉತ್ತಮ ಚಿತ್ರಕಥೆ, ನಟನೆ, ಸಂಗೀತವನ್ನು ಎಲ್ಲಾ ಭಾಷೆಯ ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂದರು.

ಪ್ರತಿಕ್ರಿಯಿಸಿ (+)