ಶುಕ್ರವಾರ, ನವೆಂಬರ್ 15, 2019
22 °C

ಕೊಡಿಯಾಲ ನಲ್ಲಿಗಳಲ್ಲಿ ಕಲುಷಿತ ನೀರು!

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೊಡಿಯಾಲ ಗ್ರಾಮದ ನಲ್ಲಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಲುಷಿತ ನೀರು ಬರುತ್ತಿದೆ.ಗ್ರಾಮ ಪಂಚಾಯಿತಿ ಕಚೇರಿ ರಸ್ತೆ, ಪೇಟೆ ಬೀದಿ ಹಾಗೂ ದೇವಾಲಯ ಬೀದಿಯ ನಲ್ಲಿಗಳಲ್ಲಿ ಚರಂಡಿ ನೀರಿನಂತೆ ಕಾಣುವ ತಿಳಿಗಪ್ಪು ಬಣ್ಣದ ನೀರು ಬರುತ್ತಿದೆ. ವಾರದಲ್ಲಿ ಮೂರು ದಿನ ಹೀಗೆ ಕಲುಷಿತ ನೀರು ಹರಿಯುತ್ತಿದೆ.

ಈ ನೀರು ಕುಡಿಯಲು ಯೋಗ್ಯ ಅಲ್ಲದ ಕಾರಣ ಜನರು ಕುಡಿಯುವ ನೀರಿಗೆ ಬವಣೆ ಪಡುತ್ತಿದ್ದಾರೆ. ದನ, ಕರುಗಳು ಕೂಡ ಈ ನೀರು ಕುಡಿಯುತ್ತಿಲ್ಲ. ಬಟ್ಟೆ ತೊಳೆಯಲೂ ಜನ ಹಿಂಜರಿಯುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ನಲ್ಲಿಗಳಲ್ಲಿ ಹೀಗೆ ಕಾಫಿ ಬಣ್ಣದ ನೀರು ಬರುತ್ತಿದೆ ಎಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಸೋಮಶೇಖರ್ ಬುಧವಾರ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಕಮಲಮ್ಮ ಅವರಿಗೆ ದೂರು ನೀಡಿದ್ದಾರೆ.`ಕೊಡಿಯಾಲ ಗ್ರಾಮಕ್ಕೆ ನೀರು ಒದಗಿಸುವ ಕುಡಿಯುವ ನೀರಿನ ಟ್ಯಾಂಕ್‌ಗೆ ಎರಡು ಕೊಳವೆ ಬಾವಿಗಳಿಂದ ನೀರು ತುಂಬಿಸಲಾಗುತ್ತಿದೆ. ಈ ಪೈಕಿ ಒಂದು ಕೊಳವೆ ಬಾವಿ 30 ವರ್ಷಗಳಷ್ಟು ಹಳೆಯದಾಗಿದ್ದು, ಅದರ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.ಹಳೆಯದಾದ ಕೊಳವೆ ಬಾವಿ ನೀರಿನ ಬೋರ್‌ವೆಲ್ ಸಂಪರ್ಕ ಕಡಿತಗೊಳಿಸಿ ಶುದ್ಧ ನೀರು ಕೊಡುವ ಪ್ರಯತ್ನ ನಡೆಸಿದ್ದೇವೆ' ಎಂದು ಕೊಡಿಯಾಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಶಾ ತಿಳಿಸಿದ್ದಾರೆ.ಏ.12: ಎಳೆಯರ ಮೇಳ 

ಮೈಸೂರು:
ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ 8 ರಿಂದ 14 ವರ್ಷದವರಿಗಾಗಿ ಏ. 12 ರಿಂದ 21 ರ ವರೆಗೆ ಗ್ರಾಮೀಣ ಎಳೆಯರ ಮೇಳ ಆಯೋಜಿಸಲಾಗಿದೆ.ಆಸಕ್ತರು ದೂ 08221-232559/ 969649 71831/72598 00344 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)