ಕೊಡುಗೆಯ ಕಲೆ

7

ಕೊಡುಗೆಯ ಕಲೆ

Published:
Updated:
ಕೊಡುಗೆಯ ಕಲೆ

ಐಟಿಸಿ ಹೋಟೆಲ್ ವಿಂಡ್ಸರ್ ಮ್ಯಾನರ್ ಸಹಯೋಗದಲ್ಲಿ ರಿನೈಸೆನ್ಸ್ ಗ್ಯಾಲರಿ ದೇಶದ ಖ್ಯಾತ ಕಲಾವಿದರ ಅಪರೂಪದ ಕಲಾಕೃತಿಗಳ ಪ್ರದರ್ಶನವನ್ನು ನಡೆಸಿತು. ಇಲ್ಲಿ ಮಾರಾಟವಾದ ಕಲಾಕೃತಿಗಳಿಂದ ಬಂದ ಹಣದ ಕೆಲ ಭಾಗವನ್ನು ಕ್ರಿಸ್ಟಲ್ ಹೌಸ್‌ಗೆ ನೀಡಿತು.ಕ್ರಿಸ್ಟಲ್ ಹೌಸ್ ಬಡ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಸ್ಥೆ. ಇದು ಎಲ್ಲ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ನೆರವಾಗುತ್ತಿದೆ. ಇದರ ಜೊತೆಗೆ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಉತ್ತಮ ಆರೋಗ್ಯ ತಪಾಸಣೆ ಒದಗಿಸಲು ಶ್ರಮಿಸುತ್ತಿದೆ.

 

ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಗಳು, ನೈತಿಕತೆ, ಜವಾಬ್ದಾರಿ ಹಾಗೂ ಭಾವೈಕ್ಯದ ಬಗ್ಗೆ ತಿಳಿಹೇಳುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ ಅವನ್ನು ಭವಿಷ್ಯದ ಸತ್ಪ್ರಜೆಯನ್ನಾಗಿಸುವುದು, ಈ ಮೂಲಕ ಆ ಮಕ್ಕಳಿಂದ ಸಮಾಜಕ್ಕೆ ಉತ್ತಮ ಕೊಡುಗೆ ನಿರೀಕ್ಷಿಸುವುದು ಇದರ ಹಿಂದಿನ ಉದ್ದೇಶ.ಇಲ್ಲಿ ಇಂಡಿಯನ್ ರೆಡ್ ಹೈದರಾಬಾದ್‌ನ ನುರಿತ ಹಿರಿಯ ಕಲಾವಿದರ ಕಲಾಕೃತಿಗಳು, ಟಿ.ವೈಕುಂಠಂ, ಲಕ್ಷ್ಮ ಗೌಡ್, ಸಚಿನ್ ಜಲ್‌ತಾರೆ, ರಮೇಶ್ ಗೋರ್ಜಲಾ, ಶ್ರೀಕಾಂತ್ ಕುರ್ವಾ, ಶ್ರೀಕಾಂತ್ ಕೋಲೆ, ಸುಧಾಕರ್ ಚಿಪ್ಪಾ, ಕುಮಾರಸ್ವಾಮಿ, ಸಂಜಯ್, ಜಿ.ಜಗದೀಶ್, ಕಪ್ಪರಿ ಕಿಶನ್ ಹಾಗೂ ಸರಸ್ವತಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.  ಸಹೃದಯ ದಾನಿಗಳು, ಕಲಾಸಕ್ತರು ಭಾಗವಹಿಸಿ ಅನೇಕ ಕಲಾಕೃತಿಗಳನ್ನು ಕೊಂಡರು.ಈ ಕಲಾಕೃತಿಗಳನ್ನು ಸೆ. 24ರ ವರೆಗೂ ವೀಕ್ಷಿಸಬಹುದು.
ಸ್ಥಳ: ರಿನೈಸನ್ಸ್ ಗ್ಯಾಲರಿ, 104 ವೆಸ್ಟ್ ಮಿನಿಸ್ಟರ್, 13 ಕನ್ನಿಂಗ್‌ಹ್ಯಾಮ್ ರಸ್ತೆ.ಮಾಹಿತಿಗೆ: 2220 2232.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry