ಶುಕ್ರವಾರ, ಮೇ 14, 2021
25 °C

ಕೊಡೇಕಲ್ಲ: ಪಹಣಿಗಾಗಿ ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ರೈತರು ಮತ್ತು ಸಾಮಾನ್ಯ ಜನರ ಹಿತಕ್ಕಾಗಿ ಪ್ರಾರಂಭಿಸಲಾಗಿರುವ ನಾಡ ಕಚೇರಿ ರೈತರಿಂದ ದೂರವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಮೀಪದ ಕೊಡೇಕಲ್ಲ ಗ್ರಾಮದ ನಾಡ ಕಚೇರಿಯ ಅಟಲ್‌ಜೀ ಜನಸ್ನೇಹಿ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ರೈತರ ನಿತ್ಯದ ಅಲೆದಾಟ ತಪ್ಪುತ್ತಿಲ್ಲ.ಪಹಣಿ ಬೇಕೆಂದರೇ ದಿನಪೂರ್ತಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ನೊವನ್ನು ಹೊರಹಾಕಿದ್ದಾರೆ.ಕೊಡೇಕಲ್ಲ ಕಂದಾಯ ವ್ಯಾಪ್ತಿಯಲ್ಲಿ ಮಾರಲಬಾವಿ, ನಾರಾಯಣಪುರ, ಬೂದಿಹಾಳ, ಹಗರಟಗಿ, ರಾಜನಕೋಳೂರ ಸೇರಿದಂತೆ ಸುಮಾರು 37 ಹಳ್ಳಿಗಳು, ತಾಂಡಾಗಳು ಬರುತ್ತವೆ.ಆದರೆ ಪಹಣಿ ವಿತರಿಸುವಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿನ ಸಿಬ್ಬಂದಿ ಯಾವಾಗಲೂ ಸರ್ವರ್ ಇಲ್ಲ, ಕಾರ್ಡ ಇಲ್ಲ ಎಂದು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಕರವೇ ಅಧ್ಯಕ್ಷ ರಮೇಶ ಬಿರಾದಾರ ಅವರ ಆರೋಪವಾಗಿದೆ. ಅಲ್ಲದೇ ನೂರಾರು ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ನಿತ್ಯ ಅಲೆದಾಡುತ್ತಿದ್ದಾರೆ.ಸೆ. 2012ರಿಂದ ಇಲ್ಲಿನ ಉಪ ತಹಸೀಲ್ದಾರ್ ಹುದ್ದೆ ಖಾಲಿಯಾಗಿದ್ದು ಇದುವರೆಗೂ ಆ ಸ್ಥಾನಕ್ಕೆ ಭರ್ತಿಯಾಗಿಲ್ಲ. ಇದರಿಂದಾಗಿ ರೈತರ ಸಮಸ್ಯೆಗಳು ಹಾಗೆಯೇ ಇವೆ. ಆದ್ದರಿಂದ ಇಲ್ಲಿ ಉಪತಹಸಿಲ್ದಾರ್ ಅವರನ್ನು ನೇಮಿಸಿ ರೈತರಿಗೆ ಪಹಣಿ ಸಮರ್ಪಕ ವಾಗಿ ಸಿಗುವಂತಾಗಬೇಕು. ವಿದ್ಯಾರ್ಥಿಗಳಿಗೆ ನಿಗದಿತ ದಿನಾಂಕದಲ್ಲಿ ಆದಾಯ, ಜಾತಿ ಪ್ರಮಾಣ ಪತ್ರ ಸಿಗುವಂತಾಗಬೇಕು.ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವದು ಎಂದು ಕರವೇ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.