ಕೊನೆಗೂ ನ್ಯಾ.ಎ.ಕೆ. ಗಂಗೂಲಿ ರಾಜೀನಾಮೆ

7
ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಕುತ್ತಾದ ಲೈಂಗಿಕ ಕಿರುಕುಳ ಪ್ರಕರಣ

ಕೊನೆಗೂ ನ್ಯಾ.ಎ.ಕೆ. ಗಂಗೂಲಿ ರಾಜೀನಾಮೆ

Published:
Updated:

ಕೋಲ್ಕತ್ತ(ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿ­­­ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರು  ಕೊನೆಗೂ ಒತ್ತಡಗಳಿಗೆ ಮಣಿದು ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಸೋಮವಾರ ಸಂಜೆ ಏಕಾಏಕಿ ರಾಜಭವನಕ್ಕೆ ತೆರಳಿದ ಗಂಗೂಲಿ, ರಾಜ್ಯಪಾಲ ಎಂ.ಕೆ. ನಾರಾಯಣನ್‌ ಅವರನ್ನು ಕಂಡು ರಾಜೀನಾಮೆ ಸಲ್ಲಿಸಿದರು. ಆದರೆ, ರಾಜೀನಾಮೆ ನೀಡಿರುವ ಕುರಿತು ರಾಜಭವನ ಮೂಲಗಳು ಖಚಿತ ಮಾಹಿತಿ ನೀಡಿಲ್ಲ.

ರಾಜ್ಯಪಾಲರೊಂದಿಗೆ ಸುಮಾರು 45 ನಿಮಿಷ ಮಾತುಕತೆ ನಡೆಸಿ ಹೊರಬಂದ ಅವರು, ರಾಜಭವ­ನದ ಹೊರಗೆ ನೆರೆದಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಹೊರಟುಹೋದರು.ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ನ್ಯಾ. ಗಂಗೂಲಿ  ತಮ್ಮೊಂದಿಗೆ ದೂರವಾಣಿ­ಯಲ್ಲಿ ಚರ್ಚಿಸಿದ್ದಾರೆ ಎಂದು ಮಾಜಿ ಅಟಾರ್ನಿ ಜನರಲ್‌ ಸೋಲಿ ಸೊರಾಬ್ಜಿ ಭಾನುವಾರ ಹೇಳಿದ್ದರು.ಆದರೆ, ರಾಜೀನಾಮೆಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಗಂಗೂಲಿ ಸೋಮವಾರ  ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರು.ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಸ್ಥಾನದಿಂದ ಗಂಗೂಲಿ ಅವರನ್ನು  ವಜಾಗೊಳಿಸಲು ಸರ್ಕಾರದ ಹಂತದಲ್ಲಿ ಪ್ರಕ್ರಿಯೆಗಳು ಆರಂಭವಾಗಿದ್ದವು.ಪ್ರಕರಣದ ಕುರಿತು ರಾಷ್ಟ್ರಪತಿಗಳ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ಗೆ ಕಳಿಸುವ ಪ್ರಸ್ತಾವನೆಗೆ ಇತ್ತೀಚೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry