ಕೊನೆಗೂ ನ್ಯಾಯ ಸಿಕ್ಕಿತು ಯುವತಿಯ ತಂದೆತಾಯಿ

7

ಕೊನೆಗೂ ನ್ಯಾಯ ಸಿಕ್ಕಿತು ಯುವತಿಯ ತಂದೆತಾಯಿ

Published:
Updated:

ನವದೆಹಲಿ (ಪಿಟಿಐ): ಅಪರಾಧಿ­ಗಳಿಗೆ ಗಲ್ಲುಶಿಕ್ಷೆ ವಿಧಿಸಿರುವುದಕ್ಕೆ ಅತ್ಯಾಚಾರ­ಕ್ಕೀಡಾಗಿ ಪ್ರಾಣಕಳೆದುಕೊಂಡ 23 ವರ್ಷ ಯುವತಿಯ ತಂದೆ–ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪುತ್ರಿಗೆ ಕೊನೆಗೂ ನ್ಯಾಯ ಸಿಕ್ಕಿತು ಎಂದು ಅವರು ಹೇಳಿದ್ದಾರೆ.‘ನ್ಯಾಯಾಲಯದ ತೀರ್ಪಿನಿಂದ ಸಂತಸವಾಗಿದೆ. ಮಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ನಮ್ಮನ್ನು ಬೆಂಬಲಿಸಿ­ದವರಿಗೆ ಕೃತಜ್ಞತೆ ಸಲ್ಲಿಸಲು ಬಯಸು­ತ್ತೇನೆ’ ಎಂದು ಯುವತಿಯ ತಾಯಿ ಸಾಕೇತ್‌ ನ್ಯಾಯಾಲಯದ ಸಂಕೀರ್ಣ­ದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅವರ ಪತಿಯೂ ಜತೆಗಿದ್ದರು.‘ಒಂದು ವೇಳೆ ಶಿಕ್ಷೆಗೆ ಗುರಿಯಾಗಿರು­ವವರು ಹೈಕೋರ್ಟ್‌ಗೆ ಹೋದರೆ, ನಾವು ಕೂಡ ಪ್ರತಿ ಹೋರಾಟ ಮಾಡುತ್ತೇವೆ.  ನ್ಯಾಯ ಪಡೆಯು ವುದ­ಕ್ಕಾಗಿ ಸುದೀರ್ಘ ಹೋರಾಟ ನಡೆಸಲು ನಾವು ಸಿದ್ಧರಾಗಿದೇವೆ’ ಎಂದೂ ಅವರು ಹೇಳಿದರು.ಯುವತಿಯ ತಂದೆ ಕೂಡ ತೀರ್ಪಿಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ‘ನಮಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಕೃತಜ್ಞತೆ  ಸಲ್ಲಿಸಲು ಇಚ್ಛಿಸುತ್ತೇನೆ. ತೀರ್ಪಿನಿಂದ ನನಗೆ ಸಂತಸವಾಗಿದೆ’ ಎಂದು ತ್ವರಿತಗತಿ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಅವರು ಹೇಳಿದರು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಯುವತಿಯ ಪೋಷಕರು ಹೇಳುತ್ತಲೇ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry