ಸೋಮವಾರ, ನವೆಂಬರ್ 18, 2019
23 °C

ಕೊನೆಗೂ ಸಿಕ್ಕಿಬಿದ್ದ ಆರೋಪಿ ಕುಪೇಂದ್ರ

Published:
Updated:

ಬೆಂಗಳೂರು: ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವವನ್ನು ಸುಟ್ಟು ಪರಾರಿಯಾಗಿದ್ದ ಕುಪೇಂದ್ರ (29) ಎಂಬಾತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.ಏ.6ರಂದು ಕಣ್ಣೂರಿನ ನಿವಾಸಿ ಬಾಲಮ್ಮ(30) ಎಂಬುವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನಾ ಸಂದರ್ಭದಲ್ಲಿ ಅವರ ಪತಿ ಸೇಲ್ವಂ ಸ್ವಂತ ಊರಾದ ಕೃಷ್ಣಗಿರಿಗೆ ಹೋಗಿದ್ದರು. ಘಟನೆ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಈ ಹಂತದಲ್ಲಿ ಬಾಲಮ್ಮ ಅವರಿಗೆ ಕಣ್ಣೂರಿನ ಕುಪೇಂದ್ರ ಎಂಬಾತನ ಜತೆ ಅನೈತಿಕ ಸಂಬಂಧ ಇರುವುದು ಗೊತ್ತಾಯಿತು. ಅಲ್ಲದೇ, ಘಟನೆ ನಂತರ ಆತ ತಲೆಮರೆಸಿಕೊಂಡಿದ್ದು ಅನುಮಾನಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.ಆತನ ಕುಟುಂಬ ಸದಸ್ಯರಿಂದ ಮಾಹಿತಿ ಕಲೆ ಹಾಕಿ ಏಪ್ರಿಲ್.11ರಂದು ಕುಪೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು. `ಬಾಲಮ್ಮ ಬೇರೆ ಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಸಂಶಯ ಇತ್ತು. ಇದನ್ನು ಪ್ರಶ್ನಿಸಲು ಏ.6ರಂದು ಆಕೆಯ ಮನೆಗೆ ಹೋದಾಗ ಜಗಳವಾಯಿತು. ಆಗ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿ ನಂತರ ಶವದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ' ಎಂದು ಕುಪೇಂದ್ರ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)