ಬುಧವಾರ, ನವೆಂಬರ್ 13, 2019
23 °C

ಕೊನೆ ಗಳಿಗೆ: ಅಖಾಡದಲ್ಲಿ 121 ಮಂದಿ

Published:
Updated:

ತುಮಕೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಬುಧವಾರ ಜಿಲ್ಲೆ ವಿವಿಧ ವಿಧಾನಸಭೆ  ಕ್ಷೇತ್ರಗಳಿಗೆ 121 ಅಭ್ಯರ್ಥಿಗಳು ಒಟ್ಟು 145 ನಾಮಪತ್ರ ಸಲ್ಲಿಸಿದ್ದಾರೆ.ತುಮಕೂರು ನಗರ- 10, ಗ್ರಾಮಾಂತರ- 13, ಚಿಕ್ಕನಾಯಕನಹಳ್ಳಿ- 8, ತಿಪಟೂರು-4, ತುರುವೇಕೆರೆ- 10, ಕುಣಿಗಲ್ 7, ಕೊರಟಗೆರೆ- 10, ಗುಬ್ಬಿ- 8, ಪಾವಗಡ- 17, ಮಧುಗಿರಿ- 21 ಮತ್ತು ಶಿರಾದಲ್ಲಿ 13 ಮಂದಿ ನಾಮಪತ್ರ ಸ್ಲ್ಲಲಿಸಿದ್ದಾರೆ.

ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಶಿವಣ್ಣ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ.ತುಮಕೂರು ನಗರ: ಬಿ.ಟಿ.ಸುನಂದಾ (ಜೆಡಿಯು), ಎಸ್.ಶಿವಣ್ಣ (ಬಿಜೆಪಿ), ಶಿವರಾಮಯ್ಯ (ಬಿಎಸ್‌ಅರ್ ಕಾಂಗ್ರೆಸ್), ತಾಜುದ್ದೀನ್ ಶರೀಫ್ (ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ), ಸೈಯದ್ ವಾಜಿದ್ ಅಹಮದ್ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್), ಟಿ.ಸಿದ್ದಗಂಗಪ್ಪ, ಎನ್.ಗೋವಿಂದರಾಜು, ನರಸೇಗೌಡ, ರಹಮತ್ ಶರೀಫ್, ಆರ್.ನಂಜೇಗೌಡ, ತೌಸಿಕ್‌ವುಲ್ಲಾಖಾನ್, ಪಿ.ಎನ್. ಕೃಷ್ಣಮೂರ್ತಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.ತುಮಕೂರು ಗ್ರಾಮಾಂತರ: ಎಂ.ಕುಂಬಯ್ಯ, ಆರ್.ಶಿವರುದ್ರಯ್ಯ (ಬಿಎಸ್‌ಆರ್ ಕಾಂಗ್ರೆಸ್), ದತಾತ್ರೇಯ, ಬಿ.ವಿ.ಉದಯಕುಮಾರ್, ಬಿ.ಎಚ್.ಕಾಳಯ್ಯ, ಅನ್ವರ್, ಡಿ.ಲಕ್ಷ್ಮಯ್ಯ, ಲಕ್ಷ್ಮಿ, ಡಿ.ರಮೇಶ್‌ಗುರುದೇವ್, ಆರ್.ನಂಜೇಗೌಡ, ಮೆಹರ್‌ತಾಜ್, ಕೆ.ಜಿ.ಬೋಜಣ್ಣ, ಎನ್.ವಿಜಯ್‌ಕುಮಾರ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.ನಿರ್ಲಕ್ಷ್ಯದಿಂದ ಕ್ಷೇತ್ರ ಹಿನ್ನಡೆ: ರಾಜಣ್ಣ

ಮಧುಗಿರಿ: ಈವರೆಗೆ ಕ್ಷೇತ್ರದ ರಾಜಕೀಯ ಅಧಿಕಾರ ಹೊಂದಿದವರು ಅಭಿವೃದ್ಧಿ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಸಮಸ್ಯೆಗಳು ಉಳಿದಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಆರೋಪಿಸಿದರು.ಪುರಸಭೆಯ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಆರ್.ಸಿ.ವಿಜಯ್‌ಕುಮಾರ್ ಜೈನ್ ಹಾಗೂ ಕಾರ್ಯಕರ್ತರನ್ನು ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1840 ಮನೆ ಮಂಜೂರಾಗಿ ಬಂದಿದ್ದರೂ; ವಾಪಸ್ ಹೋಗಿವೆ ಎಂದು ತಿಳಿಸಿದರು.ಬಿಜೆಪಿ ತೊರೆದ ಆರ್.ಸಿ.ವಿಜಯ್‌ಕುಮಾರ್ ಜೈನ್ ಮಾತನಾಡಿದರು. ಮುಖಂಡರಾದ ತುಂಗೋಟಿ ರಾಮಣ್ಣ, ಡಿ.ಜಿ.ಶಂಕರನಾರಾಯಣ ಶೆಟ್ಟಿ, ಎಂ.ವಿ.ಶ್ರೀನಿವಾಸ್, ಎಂ.ಎಸ್.ಶಂಕರನಾರಾಯಣ, ಶ್ರೀನಾಥ್, ಎಂ.ಎಸ್.ಚಂದ್ರಶೇಖರ್, ಧನಪಾಲ್, ರಂಗರಾಜು ಉಪಸ್ಥಿತರಿದ್ದರು. ವರ್ತಕರು ಹಾಗೂ ಹಮಾಲಿ ಸಂಘದ ಪದಾಧಿಕಾರಿಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಪ್ರತಿಕ್ರಿಯಿಸಿ (+)