ಶುಕ್ರವಾರ, ನವೆಂಬರ್ 22, 2019
25 °C
ವಿಧಾನಸಭಾ ಚುನಾವಣೆ

ಕೊನೆ ದಿವಸ 62 ನಾಮಪತ್ರ ಸಲ್ಲಿಕೆ

Published:
Updated:

ಚಿಕ್ಕಮಗಳೂರು: ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ 49 ಅಭ್ಯರ್ಥಿಗಳು 62 ನಾಮಪತ್ರ ಸಲ್ಲಿಸಿದ್ದಾರೆ.ಚಿಕ್ಕಮಗಳೂರು ಕ್ಷೇತ್ರಕ್ಕೆ 12 ಅಭ್ಯರ್ಥಿಗಳು 13 ನಾಮಪತ್ರ ಸಲ್ಲಿಸಿದ್ದಾರೆ. ಕೆಜೆಪಿಯಿಂದ ವೇದಮೂರ್ತಿ ಹಾಗೂ ಡಿ.ಎಸ್.ಅಶೋಕ್, ಬಿಎಸ್‌ಆರ್ ಪಕ್ಷದಿಂದ ಅಣ್ಣವೇಲ್, ಜೆಡಿಯುನಿಂದ ಟಿ.ಹರೀಶ್, ಸಿಪಿಐ (ಎಂ.ಎಲ್) ರೆಡ್ ಸ್ಟಾರ್‌ನಿಂದ ಉದ್ದಪ್ಪ ನಿಂಗಯ್ಯ, ಲೋಕಸತ್ತಾ ದಳ ಪಾರ್ಟಿಯಿಂದ ಶಂಕರಲಿಂಗೇಗೌಡ, ಎನ್‌ಸಿಪಿಯಿಂದ ಅಪ್ಸರ್ ಪಾಷ, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಎಂ.ಸುಧೀರ್, ವಿಜಯಕುಮಾರ್, ಗುರುಶಾಂತಪ್ಪ, ಧರ್ಮೇಗೌಡ, ಅಪ್ಸರ್ ಪಾಷ ನಾಮಪತ್ರ ಸಲ್ಲಿಸಿದರು.ಕಡೂರು ವಿಧಾನಸಭಾ ಕ್ಷೇತ್ರಕ್ಕೆ 9 ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ ಬೀರೂರು ದೇವರಾಜ್, ಕೆಜೆಪಿಯಿಂದ ಬೆಳ್ಳಿಪ್ರಕಾಶ್, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕೆಂಪರಾಜು, ಜೆಡಿಎಸ್‌ನಿಂದ ವೈ.ಎಸ್.ವಿ.ದತ್ತ, ವೆಲ್‌ಫೇರ್ ಪಾರ್ಟಿಯಿಂದ ಕುಮಾರ್ ನಾಯ್ಕ, ಪಕ್ಷೇತರ ಅಭ್ಯರ್ಥಿಗಳಾಗಿ ಜನಾರ್ಧನ್ ರಾವ್, ಗಂಗಾಧರ್, ನಾಗರಾಜು ಹಾಗೂ ಶಿವರುದ್ರಪ್ಪ ನಾಮಪತ್ರ ಸಲ್ಲಿಸಿದರು.ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ 15 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ನಿಂದ ಜಿ.ಎಚ್.ಶ್ರೀನಿವಾಸ್, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಕೆ.ಮಂಜುನಾಥ್, ಜೆಡಿಎಸ್‌ನಿಂದ ಟಿ.ಆರ್.ನಾಗರಾಜ್, ಸರ್ವೋದಯ ಕರ್ನಾಟಕದಿಂದ ಡಿ.ಸಿ.ಸುರೇಶ್, ಕೆಜೆಪಿಯಿಂದ ಡಿ.ಎಸ್. ಸುರೇಶ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅನುಸೂಯಾ, ಎ.ಸುರೇಶ್, ಬಿ.ತಿಮ್ಮಯ್ಯ, ವಿ.ಜಯರಾಂ, ಕಾಂತರಾಜು, ಪರಮೇಶ್ ನಾಯಕ್, ಎಚ್.ಓಂಕಾರಪ್ಪ, ಡಿ.ಆರ್. ನೀಲಕಂಠಪ್ಪ, ಟಿ.ಎಸ್.ಸುರೇಶ್, ಎಚ್.ಪಿ.ಅಶೋಕ್ ನಾಮಪತ್ರ ಸಲ್ಲಿಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ 7 ಅಭ್ಯರ್ಥಿಗಳು 10 ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ ಡಿ.ಎನ್.ಜೀವರಾಜ್, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಪೂರ್ಣೇಶ್, ಜೆಡಿಎಸ್‌ನಿಂದ ಟಿ.ಸಿ.ರಾಜೇಂದ್ರ, ಸಿಪಿಐ (ಎಂ.ಎಲ್)ನಿಂದ ಉಮೇಶ್ ಹಾಗೂ ಬಸವರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಅಬ್ರಾಹಂ, ಕೆ.ವಿ.ಮಹೇಶ್ ಸಲ್ಲಿಸಿದ್ದಾರೆ.ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ 6 ಅಭ್ಯರ್ಥಿಗಳು 6 ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಬಿ.ಎನ್.ಚಂದ್ರಪ್ಪ, ಸಿಪಿಐಯಿಂದ ಸಾತಿ ಸುಂದರೇಶ್, ಜೆಡಿಎಸ್‌ನಿಂದ ಬಿ.ಬಿ.ನಿಂಗಯ್ಯ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಎಚ್.ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಬಿ.ಎಂ.ರಮೇಶ್ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)