ಕೊಪ್ಪಳದಲ್ಲಿ 31ರಂದು ವಾಯುಪಡೆ ನೇಮಕಾತಿ ರ‌್ಯಾಲಿ

ಮಂಗಳವಾರ, ಜೂಲೈ 23, 2019
25 °C

ಕೊಪ್ಪಳದಲ್ಲಿ 31ರಂದು ವಾಯುಪಡೆ ನೇಮಕಾತಿ ರ‌್ಯಾಲಿ

Published:
Updated:

ಹುಬ್ಬಳ್ಳಿ:ಭಾರತೀಯ ವಾಯುಪಡೆಯ ಗ್ರೂಪ್ ಎಕ್ಸ್ ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ನೇಮಕಾತಿ ರ‌್ಯಾಲಿ ಇದೇ 31ರಂದು ಕೊಪ್ಪಳದ ಗದಗ ರಸ್ತೆಯಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.1993ರ ಮೇ 1ರಿಂದ 1996ರ ನವೆಂಬರ್ 30ರ ಒಳಗೆ ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ರ‌್ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ 50 ಸೇಕಡಾ ಅಂಕಗಳೊಂದಿಗೆ ಪಾಸಾಗಿರಬೇಕು ಅಥವಾ ಮೆಕಾನಿಕಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‌ಸ್ಟ್ರುಮೆಂಟೇಷನ್ ಟೆಕ್ನಾಲಜಿ ಅಥವಾ ಇನ್‌ಫಾರ್ಮೇಷನ್ ಟೆಕ್ನಾಲಜಿ ವಿಷಯಗಳಲ್ಲಿ ಕನಿಷ್ಠ 50 ಶೇಕಡಾ ಅಂಕಗಳೊಂದಿಗೆ ಡಿಪ್ಲೋಮಾ ಪಾಸಾಗಿರಬೇಕು.ಆಸಕ್ತರು ಎಸ್‌ಎಸ್‌ಎಲ್, ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾದ ಎಲ್ಲ ಅಂಕ ಪಟ್ಟಿಯ ಮೂಲ ಪ್ರತಿಗಳು ಮತ್ತು ಮೂರು ಜೆರಾಕ್ಸ್ ಪ್ರತಿಗಳೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಏಳು ಭಾವಚಿತ್ರಗಳ ಜೊತೆ ರ‌್ಯಾಲಿಗೆ ಹಾಜರಾಗಬೇಕು.  ಮಾಹಿತಿಗೆ ವಾಯುಪಡೆಯ ವೆಬ್‌ಸೈಟ್    www.indianairforce.nic.in  ನೋಡಬಹುದಾಗಿದೆ. ಅಥವಾ ಬೆಂಗಳೂರಿನ ಏರ್‌ಮನ್ ನೇಮಕಾತಿ ಕೇಂದ್ರವನ್ನು (080-25592199) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry