ಕೊಪ್ಪಳ: ಶರೀರ ರಚನೆ- 15ರಂದು ರಾಷ್ಟ್ರ ಮಟ್ಟದ ಗೋಷ್ಠಿ

7

ಕೊಪ್ಪಳ: ಶರೀರ ರಚನೆ- 15ರಂದು ರಾಷ್ಟ್ರ ಮಟ್ಟದ ಗೋಷ್ಠಿ

Published:
Updated:

ಕೊಪ್ಪಳ: `ಶರೀರ ರಚನೆ~ ಎಂಬ ವಿಷಯ ಕುರಿತಂತೆ ನಗರದ ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಅ. 15ರಂದು ರಾಷ್ಟ್ರ ಮಟ್ಟದ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್.ಸವಡಿ ಹೇಳಿದರು.ಅವರು ನಗರದಲ್ಲಿ ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಮಹಾವಿದ್ಯಾಲಯದ ಧನ್ವಂತರಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 9.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಗವಿಸಿದ್ಧೇಶ್ವರ ಸ್ವಾಮೀಜಿ ಈ ಗೋಷ್ಠಿಯನ್ನು ಉದ್ಘಾಟಿಸುವರು.ಪುಣೆಯ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ.ವಿ.ವಿ.ದಾಯ್‌ಫೋಡೆ ಮುಖ್ಯಭಾಷಣ ಮಾಡುವರು. ಬೆಳಗಾವಿಯ ಜೆಎನ್‌ಎಂಸಿಯ ಶರೀರ ರಚನಾಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ವಿ.ಎಸ್.ಶಿರೋಳ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.`ಅನ್ನವಹಶ್ರೋತಗಳು ಹಾಗೂ ಅವುಗಳ ರಚನೆ~ ಎಂಬುದು ಈ ಗೋಷ್ಠಿಯ ಮುಖ್ಯ ವಿಷಯವಾಗಿದ್ದು,  ವಿಷಯ ಕುರಿತಂತೆ ಪುಣೆಯ ಪ್ರೊ.ಎಸ್.ಎಸ್.ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ಮುಕುಂದ ಎರೆಂಡೆ, ಆಂಧ್ರಪ್ರದೇಶದ ಎಎಲ್‌ಎನ್ ರಾವ್ ಸರ್ಕಾರಿ ಆಯುರ್ವೇದ ಕಾಲೇಜಿನ ಶರೀರ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆದಿನಾರಾಯಣ, ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಗಿರಿಧರ ಕಂಠಿ ವಿಷಯ ಮಂಡನೆ ಮಾಡುವರು ಎಂದು ಹೇಳಿದರು.ಉಪಪ್ರಾಚಾರ್ಯ ಡಾ.ಕೆ.ಬಿ.ಹಿರೇಮಠ, ಉಪನ್ಯಾಸಕರಾದ ಡಾ.ಎಸ್.ಎನ್.ಹಕ್ಕಂಡಿ, ಡಾ.ಸಿ.ಎಸ್.ಕರಮುಡಿ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry