ಕೊಯಮತ್ತೂರು, ಸೇಲಂಗೆ ನೂತನ ಬಸ್ ಸೇವೆ

7

ಕೊಯಮತ್ತೂರು, ಸೇಲಂಗೆ ನೂತನ ಬಸ್ ಸೇವೆ

Published:
Updated:

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಸೇಲಂಗೆ ನೂತನ ಬಸ್ ಸೇವೆ ಆರಂಭಿಸಿದ್ದು, ಕೊಯಮತ್ತೂರು, ತಿರುನಲ್ಲಾರ್ ಮತ್ತು ಮಾಹೆಗೆ ಇದೇ ತಿಂಗಳಿನಲ್ಲಿ ಹೊಸ ಬಸ್ ಸೇವೆ ಆರಂಭಿಸಲಿದೆ.

ಬೆಂಗಳೂರಿನಿಂದ ಸೇಲಂಗೆ ಇದೇ 5ರಿಂದ `ಕರ್ನಾಟಕ ವೈಭವ~ ಬಸ್ ಸೇವೆ ಆರಂಭವಾಗಿದೆ.ಕೊಯಮತ್ತೂರಿಗೆ ಇದೇ 20ರಿಂದ ವೋಲ್ವೊ ಬಸ್ ಸೇವೆ ಆರಂಭವಾಗಲಿದ್ದು, ಸೇಲಂ ಮತ್ತು ಮಾಹೆಗೆ ಇದೇ 27ರಿಂದ ಹೊಸ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.30 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ  7760990561 ಅಥವಾ 080-22870099 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry