ಕೊಯ್ನಾದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ

ಬೆಳಗಾವಿ: ಜಿಲ್ಲೆಯಲ್ಲಿ ಭಾನುವಾರ ಮಳೆ ಇಳಿಮುಖವಾಗಿದೆ. ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ಅತ್ತ ಮಹಾರಾಷ್ಟ್ರದ ಪ್ರಮುಖ ಹಾಗೂ ಬೃಹದಾಕಾರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಈ ನೀರೂ ಕೃಷ್ಣಾಗೆ ಬಂದು ಸೇರಲಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೆಜ್ನಿಂದ 1.52 ಲಕ್ಷ ಕ್ಯೂಸೆಕ್, ಕಣೇರಿ ಜಲಾಶಯದಿಂದ 5,325 ಕ್ಯೂಸೆಕ್, ವಾರಣಾ ಜಲಾಶಯದಿಂದ 25,670 ಕ್ಯೂಸೆಕ್, ರಾಧಾನಗರಿ ಜಲಾಶಯದಿಂದ 2,200 ಕ್ಯೂಸೆಕ್, ಧೂಮ ಜಲಾಶಯದಿಂದ. 2,840, ಕೊಯ್ನಾ ಜಲಾಶಯದಿಂದ 2,100 ಕ್ಯುಸೆಕ್ ನೀರು ಹೊರಬಿಡಲಾಗಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಹಾಗೂ ಉಪನದಿಗಳ ಹರಿವು ಹೆಚ್ಚಳವಾಗಿದೆ.
ಕೊಯ್ನಾದಿಂದ ಈಗ 2,100 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಜಲಾಶಯ ಭರ್ತಿಯಾದಂತೆ ಹಂತ ಹಂತವಾಗಿ ಹೆಚ್ಚಿನ ನೀರನ್ನು ಹೊರ ಬಿಡಲಾಗುವುದು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.