ಕೊರಗರಿಗೆ ಸ್ಮಾರ್ಟ್ ಕಾರ್ಡ್ ಯೋಜನೆ ಶೀಘ್ರ

ಮಂಗಳವಾರ, ಜೂಲೈ 23, 2019
20 °C
ಅಂತಿಮ ಹಂತದ ಸಿದ್ಧತೆ: ವಿಜಯ ಪ್ರಕಾಶ್

ಕೊರಗರಿಗೆ ಸ್ಮಾರ್ಟ್ ಕಾರ್ಡ್ ಯೋಜನೆ ಶೀಘ್ರ

Published:
Updated:

ಮಂಗಳೂರು: ಜಿಲ್ಲೆಯ ಕೊರಗ ಸಮುದಾಯದ ಜನರಿಗೆ `ಸ್ಮಾರ್ಟ್ ಕಾರ್ಡ್' ನೀಡುವ ಯೋಜನೆ ಅಂತಿಮ ಹಂತದಲ್ಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ನಿರ್ಗಮನ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಹೇಳಿದರು.ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸಮೀಕ್ಷೆ ಪೂರ್ಣಗೊಂಡಿದ್ದು, ಯೋಜ ನೆಯ ಶೇ 80ರಷ್ಟು ಕೆಲಸಗಳು ಪೂರ್ಣ ಗೊಂಡಿವೆ. ಸ್ಮಾರ್ಟ್ ಕಾರ್ಡ್‌ನಲ್ಲಿ ಪ್ರತಿ ಸದಸ್ಯರಿಗೆ ವಿಶೇಷ ಗುರುತಿನ ಸಂಖ್ಯೆ ಇರುತ್ತದೆ. ಆ ಸಂಖ್ಯೆಯ ಮೂಲಕ ಆ ವ್ಯಕ್ತಿಯ ಅನಾರೋಗ್ಯ ಸಮಸ್ಯೆ, ಕುಟುಂಬದವರ ವಿವರ, ಸರ್ಕಾರಿ ಯೋಜನೆ ಪಡೆದುಕೊಂಡಿರುವ ವಿವರಗಳೂ ಸಿಗಲಿವೆ.ನಗರದಲ್ಲಿ 9 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿವರಿಸಿದರು. ನಿರ್ಮಲ ಪುರಸ್ಕಾರ: ಜಿಲ್ಲಾ ಪಂಚಾಯಿತಿಗೆ ರಾಷ್ಟ್ರಪತಿ ಅವರಿಂದ ನಿರ್ಮಲ ಗ್ರಾಮ ಪುರಸ್ಕಾರ ಲಭಿಸಿದ್ದು, ನೈರ್ಮಲ್ಯ ಯೋಜನೆಗಳಲ್ಲಿ ರಾಷ್ಟ್ರದಲ್ಲಿ 11ನೇ ಸ್ಥಾನದಲ್ಲಿರುವ ದ.ಕ.ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ದಲ್ಲಿದೆ.

ಜಿಲ್ಲೆಯ 203 ಗ್ರಾಮ ಪಂಚಾ ಯಿತಿಗಳು ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಕಡಬದಲ್ಲಿರುವ ದ್ರವ ತ್ಯಾಜ್ಯ ವಿಲೇವಾರಿ ಘಟಕ ರಾಜ್ಯ ದಲ್ಲಿ ಪ್ರಥಮವಾಗಿದ್ದು, ಈ ಯೋಜನೆ ಗಳು ಸಂತೃಪ್ತಿ ನೀಡಿವೆ ಎಂದರು.ಬೆಳ್ತಂಗಡಿ ತಾಲ್ಲೂಕಿನ ಲಾಯಿಲ ದಲ್ಲಿರುವ ಗ್ರಾಮೀಣ ನ್ಯಾಪ್‌ಕಿನ್ ಘಟಕವು ಗ್ರಾಮೀಣ ವಿಭಾಗದ 30 ಆವಿಷ್ಕಾರಗಳ ಪೈಕಿ ಒಂದು ಎಂದು ನಬಾರ್ಡ್ ಗುರುತಿಸಿದೆ ಎಂದರು.ಜಿಲ್ಲೆಯಲ್ಲಿರುವ 2102 ಅಂಗನ ವಾಡಿಗಳ ಪೈಕಿ 1655 ಅಂಗನ ವಾಡಿಗಳು ಸ್ವಂತ ಕಟ್ಟಡ ಹೊಂದಿವೆ. ಎಲ್ಲ ಅಂಗನವಾಡಿಗಳ ವಿದ್ಯುದೀಕ ರಣವೂ ಒಂದು ಪ್ರಮುಖ ಯೋಜನೆ ಯಾಗಿದೆ. ಅಂಗನವಾಡಿ ಮಕ್ಕಳಿಗೆ ನೀಡಲಾದ ಪೌಷ್ಟಿಕ ಆಹಾರ ರಾಜ್ಯಕ್ಕೇ ಮಾದರಿಯಾದುದು ಎಂದರು.

ಜಿಲ್ಲೆಯ 641 ಪ್ರೌಢಶಾಲೆಗಳ ಮಹಿಳಾ ಶೌಚಾಲಯಗಳಲ್ಲಿ ಅಳವಡಿ ಸಿರುವ ನ್ಯಾಪ್‌ಕಿನ್ ವಿಲೇವಾರಿ ಘಟಕವೂ ಸಂತಸ ನೀಡಿದ ಯೋಜನೆ.ಸಹಕಾರಿ ಸಂಘಗಳ ಮೂಲಕ 6 ರಿಂದ 14 ವರ್ಷ ವಯೋಮಾನದ 641 ಅಂಗವಿಕಲ ಮಕ್ಕಳಿಗೆ ಸ್ಥಳೀಯ ಸಹಕಾರಿ ಸಂಘಗಳು ರೂ 500ರಿಂದ 5 ಸಾವಿರದವರೆಗೆ ಸಹಾಯ ಮಾಡಿವೆ. ರೂ 8 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಸಹಕಾರಿ ಸಂಘಗಳು ನೀಡಿವೆ ಎಂದು ಅವರು ಹೇಳಿದರು.ಎಚ್‌ಐವಿ ಬಾಧಿತರ ಕುಟುಂಬಕ್ಕೆ ಬಸವ ವಸತಿ ಯೋಜನೆಯಡಿ ಮನೆ ನೀಡಿರುವುದು ಪ್ರಮುಖ ವಿಚಾರ. ಜಿಲ್ಲೆಯ 3633 ಸ್ತ್ರೀಶಕ್ತಿ ಗುಂಪುಗಳಲ್ಲಿ `ರೆಡ್ ರಿಬ್ಬನ್ ಕ್ಲಬ್'ಗಳನ್ನೂ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry