ಬುಧವಾರ, ಏಪ್ರಿಲ್ 21, 2021
25 °C

ಕೊರಿಯಾ ಯುವತಂಡ ಗಾಂಧಿ ಭವನಕ್ಕೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಮತ್ತು ದಕ್ಷಿಣ ಕೊರಿಯಾ ದೇಶದ ಯುವ ವಿನಿಮಯ ಕಾರ್ಯಕ್ರಮದ ಅಂಗವಾಗಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಕೊರಿಯಾ ದೇಶದ ಇಪ್ಪತ್ತು ಯುವಕ ಯುವತಿಯರ ತಂಡ ಇತ್ತೀಚೆಗೆ ನಗರದ ಗಾಂಧಿ ಭವನಕ್ಕೆ ಭೇಟಿ ನೀಡಿತ್ತು.ಗಾಂಧೀಜಿ ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿ ಜೀವನದ ವಿವಿಧ ಘಟನೆಗಳ ಚಿತ್ರಗಳು, ವಿನೋಬಾ ಅವರ ಭಾವಚಿತ್ರಗಳ ಜತೆ ಗಾಂಧೀಜಿ ಜೀವನ ಕುರಿತ ಕಿರುಚಿತ್ರವನ್ನು ಕೊರಿಯಾ ತಂಡದ ಸದಸ್ಯರು ವೀಕ್ಷಿಸಿದರು.ಮಹಾತ್ಮ ಗಾಂಧೀಜಿ ಅವರ ವ್ಯಕ್ತಿ ವಿಚಾರ ತಿಳಿದು ಸ್ಫೂರ್ತಿ ಪಡೆದಿರುವುದಾಗಿ ಅವರು ಹೇಳಿದರು. ಎಲ್ಲರೂ ಗಾಂಧಿ ಪ್ರತಿಮೆಗೆ ಪುಷ್ಟ ಅರ್ಪಿಸಿ, ಗೌರವಾರ್ಪಣೆ ಸಲ್ಲಿಸಿದರು.ಕೊರಿಯಾ ಸರ್ಕಾರದ ಯುವ ನೀತಿ ವಿಭಾಗದ ಸಹಾಯಕ ನಿರ್ದೇಶಕಿ ಹು ಹ್ವಾ ಸು ನೇತೃತ್ವದ ತಂಡದ ಎಲ್ಲರಿಗೂ ಖಾದಿ ಹಾರ ಹಾಕುವ ಮೂಲಕ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಬರಮಾಡಿಕೊಂಡರು.ರಾಷ್ಟ್ರೀಯ ಸೇವಾ ಯೋಜನೆಯ ಸಂಪರ್ಕಾಧಿಕಾರಿ ಡಾ.ಕೆ.ಬಿ.ಧನಂಜಯ, ಕೇಂದ್ರ ಸರ್ಕಾರದ ಯುವಜನ ಇಲಾಖೆಯ ಅಧಿಕಾರಿಗಳಾದ ಅಧಿಕಾರಿ ಖಾದ್ರಿ ನರಸಿಂಹಯ್ಯ, ಕಾರ್ತಿಕೇಯನ್, ಉಪ್ಪಿನ್, ರಾಷ್ಟ್ರೀಯ ಸೇವಾ ಯೋಜನೆಯ ವಿಶ್ರಾಂತ ಸಂಯೋಜನಾಧಿಕಾರಿ ಆರ್.ನರಸಿಂಹಯ್ಯ, ಗಾಂಧಿಭವನದ ಕಾರ್ಯದರ್ಶಿಗಳಾದ ಡಿ.ಕೆ.ಕೋದಂಡರಾಮ, ಪ್ರೊ.ಜಿ.ಬಿ.ಶಿವರಾಜು, ಸದಸ್ಯರಾದ ಜೀರಿಗೆ ಲೋಕೇಶ್, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಡಾ.ವಸಂತಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.